
ಧರ್ಮಸ್ಥಳದ ಬೆನ್ನಲ್ಲೇ ಧರ್ಮಸ್ಥಳದ ಮಾದರಿಯಲ್ಲಿ ಬಾಬಾ ಬುಡನ್ ದರ್ಗಾದಲ್ಲಿ ಎಸ್ ಐಟಿ ತನಿಖೆ ನಡೆಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.


ಹೌದು, ಧರ್ಮಸ್ಥಳದ ಮಾದರಿಯಲ್ಲಿ ಎಸ್ ಐಟಿ ರಚನೆ ಮಾಡಿ ಇನಾಂ ದತ್ತಾತ್ರೇಯ ಬಾಬ ಬುಡನ್ ಸ್ವಾಮಿ ದರ್ಗಾದಲ್ಲಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
