November 8, 2025
WhatsApp Image 2025-08-12 at 9.02.09 AM

ಪುತ್ತೂರು: ಪುತ್ತೂರು ಬಿಜೆಪಿ ನಾಯಕ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿಯೊಬ್ಬಳು, ತನಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ.

ಆಗಸ್ಟ್ 11 ರಂದು, ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರವನ್ನು ಸಲ್ಲಿಸಿದರು.

ಇತ್ತೀಚೆಗೆ, ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಮನೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ನನ್ನ ತಾಯಿ ಮತ್ತು ನಾನು ಅಪರಿಚಿತರು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಓಡಾಡುವುದನ್ನು ಗಮನಿಸಿದ್ದೇವೆ. ನಾನು ದಾಖಲಿಸಿದ ವಂಚನೆ ಪ್ರಕರಣದಲ್ಲಿ, ನ್ಯಾಯಾಲಯದಲ್ಲಿ  ನನಗೆ ನ್ಯಾಯ ಸಿಗುವುದು ನನ್ನ ಮಗುವಿನ ಮೂಲಕ ಮಾತ್ರ. ಆದ್ದರಿಂದ, ನನ್ನ ಮಗುವಿನ ಜೀವಕ್ಕೆ ಜೀವಕ್ಕೆ  ಯಾರಿಂದಲಾದರೂ ಅಪಾಯವಿರಬಹುದು ಎಂದು ನನಗೆ ಭಯವಿದೆ. ನನಗೆ ಮತ್ತು ನನ್ನ ಮಗುವಿಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

About The Author

Leave a Reply