ಕೊಳ್ನಾಡು: ಸರಕಾರಿ ಪ್ರೌಡ ಶಾಲೆ ನಾರ್ಶ ಮೈದಾನ ಶಾಲೆಯಲ್ಲಿ Interact ಕ್ಲಬ್ ಪದಗ್ರಹಣ

ಕೊಳ್ನಾಡು: ರೋಟರಿ ಕ್ಲಬ್ ಬಿ‌.ಸಿ‌.ರೋಡ್ ಸಿಟಿ (CLUB ಸಂಖ್ಯೆ 223058)ವತಿಯಿಂದ ಮಲೆನಾಡ ಗಾಂಧಿ ಎಚ್.ಜಿ‌.ಗೋವಿಂದೇಗೌಡ ಪ್ರಶಸ್ತಿ ಪುರಸ್ಕೃತ ಸರಕಾರಿ ಪ್ರೌಡಶಾಲೆ ನಾರ್ಶ ಮೈದಾನ ಕೊಳ್ನಾಡು ಶಾಲೆಯಲ್ಲಿ ಇಂಟ್ರ್ಯಾಕ್ಟ್ ಕ್ಲಬ್ ಪಧಗ್ರಹಣ ಸಮಾರಂಭ ಇಂದು ಶಾಲಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಅದ್ಯಕ್ಷರಾದ ದಿವಾಕರ ಶೆಟ್ಟಿ ಅದ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ ವಲಯ 4 ರ ಅಸಿಸ್ಟೆಂಟ್ ಗವರ್ನರ ರೂ,ಮಾಜಿ ತಾಲೂಕು ಪಂಚಾಯತ್ ಅದ್ಯಕ್ಷರೂ,ಮಾಜಿ ಎ.ಪಿ‌‌.ಎಂ.ಸಿ ಅದ್ಯಕ್ಷರೂ ಆದ ರೊ.ಪದ್ಮನಾಭ ರೈ ಮಾತನಾಡಿ 12-18 ರ ವಯೋಮಿತಿಯಲ್ಲಿ ರೋಟರಿ ವತಿಯಿಂದ ಇಂಟರಾಕ್ಟ್ ಕ್ಲಬ್ ರಚಿಸಿ ಹದಿಹರೆಯದ ಮಕ್ಕಳಲ್ಲಿ ನಾಯಕತ್ವ ಗುಣ,ಸೇವಾ ಮನೋಬಾವನೆ ಮೈಗೂಡಿಸಿಕೊಂಡು ಸಮಾಜಮುಖಿಯಾಗಲು ಸಹಕಾರಿಯಾಗುವಂತೆ ಸ್ಥಾಪಿತವಾದ ಸಂಘಟನೆಯಾಗಿದೆ,ಅಲ್ಲದೆ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಮಾನಸಿಕ ಸದೃಡರಾಗಿ ಎದುರಿಸಲು ಸಿದ್ದತೆಗಳನ್ನು ಮಾಡುವಂತೆ ಪ್ರೇರಣೆ,ಸಮಾಜದಲ್ಲಿ ಆಗು-ಹೋಗುಗಳ ಬಗ್ಗೆ ಗಮನಹರಿಸಿ ಮಕ್ಕಳು ಬೆಳೆಬೆಳೆಯುತ್ತಾ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಶಾಲಾ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ರೋಟರಿ ಕ್ಲಬ್ ವತಿಯಿಂದ ನಡೆಸುವ ಸಮಾಜಮುಖಿ ಕೆಲಸಗಳಿಗೆ ಇಂಟರಾಕ್ಟ್ ಕ್ಲಬ್ ಮಾತೃ ಕ್ಲಬ್ ಜೊತೆ ಸೇರಿಸಿ ಕೊಂಡು ಅವರ ಮೂಲಕ ಕಾರ್ಯಪ್ರವರ್ತನೆ ಮಾಡಲಿದ್ದೇವೆ ಎಂದು ತಿಳಿಸಿ ಶಾಲೆಯ ಇಂಟರಾಕ್ಟ್ ಕ್ಲಬಿನ ನೂತನ ಅದ್ಯಕ್ಷೆ ಸಝ ಪಾತಿಮ ಹಾಗೂ ತಂಡಕ್ಕೆ ಅಭಿನಂದಿಸಿ ಶುಭಕೋರಿದರು.

ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಅದ್ಯಕ್ಷರಾದ, ಮಾಜಿ ಪೋಲಿಸ್ ಅಧಿಕಾರಿ ರೊ. ದಿವಾಕರ ಶೆಟ್ಟಿ ನೂತನ ಇಂಟರಾಕ್ಟ್ ಕ್ಲಬ್ ಗೆ ಪದಗ್ರಹಣ ನಡೆಸಿಕೊಟ್ಟು ಮಾತನಾಡಿ ಅಂತರಾಷ್ಟ್ರಿಯವಾಗಿ ಸರಿಸುಮಾರು 200 ಕ್ಕಿಂತ ಲೂ ಹೆಚ್ಚು ದೇಶಗಳಲ್ಲಿ ರೋಟರಿ ಕ್ಲಬ್ ಕಾರ್ಯನಿರ್ವಹಿಸುತ್ತಿದೆ.ಮಹಾಮಾರಿ ರೋಗವಾದ ಪೋಲಿಯೋ ನಿರ್ಮೂಲನೆಯಲ್ಲಿ ಸಹಭಾಗಿಯಾಗಿ ಕೈಜೋಡಿಸಿ ವಿಶ್ದದಲ್ಲಿಯೇ ಪೋಲಿಯೊ ನಿರ್ಮೂಲನ ಕಾರ್ಯಕ್ರಮ ದ ನೇತೃತ್ವ ವಹಿಸಿ ಇಂದು ಭಾರತದಲ್ಲಿ ಪೋಲಿಯೋ ಮುಕ್ತ ಭಾರತ ಮಾಡಲು ರೋಟರಿ ಕ್ಲಬಿನ ಸಹಕಾರದಿಂದ ಸಾದ್ಯವಾಗಿದೆ ಎಂದರು‌‌.ಸಮಾರಂಭ ದಲ್ಲಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ರಾದ ರೊ. ಟಿ ಶೇಷಪ್ಪ ಮೂಲ್ಯ ಉಪಸ್ಥಿತರಿದ್ದರು.

ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ ಕೊಡುಗೆಯಾಗಿ ನೀಡಿದ ಪ್ರೌಡಶಾಲಾ ವಿದ್ಯಾರ್ಥಿನಿ ವಿಭಾಗದ ವಾಲಿಬಾಲ್ ತಂಡಕ್ಕೆ ಕ್ರೀಡಾ ಸಮವಸ್ತ್ರವನ್ನು (ಜೆರ್ಸಿ)ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಕೊಳ್ನಾಡು- ಸಾಲೆತ್ತೂರು ಲಯನ್ಸ್ ಕ್ಲಬ್ ಮಾಜಿ ಅದ್ಯಕ್ಷರೂ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಹಾಜಿ ಎನ್.ಸುಲೈಮಾನ್ ಸಿಂಗಾರಿ,ಶಾಲಾ ಮುಖ್ಯೋಪಾದ್ಯರೂ,ಅತ್ಯುತ್ತಮ ಶಿಕ್ಷಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಕೆ‌‌.ಗೋಪಾಲಕೃಷ್ಣ ನೇರಳಕಟ್ಟೆ,ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ ಮಾತನಾಡಿ ಶುಭಕೋರಿದರು.

ಈ ಸಂಧರ್ಭದಲ್ಲಿ ಶಿಕ್ಷಕರಾದ ಶರತ್ ಕುಮಾರ್ ಚೌಟ,ಕ್ಷಮಾ ಮೇಡಂ,ಶುಭ ಮೇಡಂ,ಭಾರತಿ ಮೇಡಂ,ಪವಿತ್ರ ಮೇಡಂ,ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್ ರಪೀಕ್,ಶಾಲಾ ಕಛೇರಿ ಸಿಬ್ಬಂದಿ ಅನಿಲ್,ವಿದ್ಯಾರ್ಥಿ ನಾಯಕಿ ಸಝ ಪಾತಿಮ ಉಪಸ್ಥಿತರಿದ್ದರು..

ಕಾರ್ಯಕ್ರಮವನ್ನು ಮುಖ್ಯ್ಯೊಪಾಧ್ಯಯರಾದ ಜಿ.ಕೆ.ಗೋಪಾಲಕೃಷ್ಣ ನೇರಳಕಟ್ಟೆ ಸ್ವಾಗತಿಸಿ ನಿರೂಪಿಸಿದರು‌.ಶಿಕ್ಷಕ ಶರತ್ ಕುಮಾರ್ ಚೌಟ ಧನ್ಯವಾದ ಸಲ್ಲಿಸಿದರು.

Leave a Reply