November 8, 2025
WhatsApp Image 2025-07-31 at 12.15.19 PM
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ತೋರಿಸಿರುವ ಸ್ಥಳಗಳಲ್ಲಿ ಈಗಾಗಲೇ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಿದರೂ ಒಂದು ಸ್ಥಳವನ್ನು ಹೊರತುಪಡಿಸಿ ಬೇರೆಲ್ಲೂ ಯಾವುದೇ ಅಸ್ಥಿಪಂಜರಗಳ ಅವಶೇಷ ಸಿಕ್ಕಿಲ್ಲ. ಇದರಿಂದ ಎಸ್ ಐಟಿ ತಂಡ ದೂರುದಾರ ಮಂಪರು ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ.ಹೌದು, ದೂರುದಾರ ಮಾಸ್ಕ್ ಮ್ಯಾನ್ ತೋರಿಸಿದ್ದ 6 ನೇ ಪಾಯಿಂಟ್ ಹೊರತುಪಡಿಸಿದರೆ ಬೇರೆ ಯಾವುದೇ ಸ್ಥಳದಲ್ಲಿ ಅಸ್ಥಿಪಂಜರ ಸಿಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ನಡುವೆ ದೂರುದಾರ 30 ಕಡೆಗಳಲ್ಲಿ 300ಕ್ಕೂ ಹೆಚ್ಚು ಶವಗಳನ್ನು ತಾನು ಹೂತಿಟ್ಟಿರುವುದಾಗಿ ಎಸ್ ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ಅಲ್ಲದೇ ಈಗಾಗಲೇ ಶೋಧ ನಡೆಸಿರುವ ಸ್ಥಳವೂ ಸೇರಿದಂತೆ ತಾನು ತೋರಿಸುವ ಎಲ್ಲಾ ಸ್ಥಳಗಳಲ್ಲಿಯೂ ಜಿಪಿಆರ್ ಬಳಸಿ ಶೋಧ ನಡೆಸುವಂತೆ ಮನವಿ ಮಾಡಿದ್ದಾನೆ.ಶವ ಹೂತಿದ್ದಾಗಿ ದೂರುದಾರ ತಪ್ಪೊಪ್ಪಿಕೊಂಡ ನಂತ್ರ, ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಸೂಚಿಸಿತ್ತು. ನಿನ್ನೆ ಎಸ್ಐಟಿಯಿಂದ 13ನೇ ಪಾಯಿಂಟ್ ನಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳ ತೆಗೆದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಉತ್ಕನನ ಕಾರ್ಯವನ್ನು ಎಸ್ಐಟಿ ಮುಕ್ತಾಯಗೊಳಿಸಿದೆ.ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಈವರೆಗೆ 1 ರಿಂದ 13 ಪಾಯಿಂಟ್ ಗಳಲ್ಲಿ ಅಸ್ಥಿ ಪಂಜರಗಳಿಗಾಗಿ ಉತ್ಕನನ ಕಾರ್ಯವನ್ನು ನಡೆಸಲಾಗುತ್ತಿದೆ. ಪಾಯಿಂಟ್ ನಂ.6ರಲ್ಲಿ ಶೋಧ ಕಾರ್ಯದ ವೇಳೆಯಲ್ಲಿ ಮಾತ್ರ ಅಸ್ಥಿ ಪಂಜರಗಳು ದೊರೆತಿದ್ದರು. ಅದರ ಹೊರತಾಗಿ ಈವರೆಗೆ ದೂರುದಾರ ಗುರುತಿಸಿದಂತ ಪಾಯಿಂಟ್ ನಲ್ಲಿ ಅಸ್ಥಿ ಪಂಜರ ದೊರೆತಿಲ್ಲ.ನಿನ್ನೆ ಪಾಯಿಂಟ್ ನಂ.13ರಲ್ಲಿ ಜಿಪಿಆರ್ ಯಂತ್ರವನ್ನು ಬಳಸಿ ಸ್ಕ್ಯಾನ್ ಮಾಡಲಾಯಿತು. ಈ ಬಳಿಕ ಜಿಪಿಆರ್ ಯಂತ್ರದಲ್ಲಿ ದಾಖಲಾಗಿದ್ದಂತ ಡೇಟಾವನ್ನು ತಂತ್ರಜ್ಞರು ಪರಿಶೀಲನೆ ನಡೆಸಿದರು. ಆ ನಂತ್ರ ಎರಡು ಜೆಸಿಬಿ ಬಳಸಿ ಪಾಯಿಂಟ್ ನಂ.13ರಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳದವರೆಗೂ ತೆಗೆದರೂ ಯಾವುದೇ ಅಸ್ಥಿ ಪಂಜರ ದೊರೆಯಲಿಲ್ಲ. ಹೀಗಾಗಿ ಸ್ಥಳ ಮಹಜರು ನಡೆಸಿ, ಎಸ್ಐಟಿ ಅಧಿಕಾರಿಗಳು ನಿನ್ನೆಯ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದರು.

About The Author

Leave a Reply