
ಮಂಗಳೂರು : ನಗರದಲ್ಲಿ ವ್ಯಕ್ತಿಯೊಬ್ಬರ ಬಳಿ ಕಸ್ಟಮ್ ಅಧಿಕಾರಿಗಳು ಎಂದು ಹೇಳಿ ಅವರ ಹತ್ತಿರ ಇದ್ದ ಚಿನ್ನವನ್ನು ದರೋಡೆ ಮಾಡಿದ ಪ್ರಕರಣ ಸಂಭವಿಸಿದೆ. ಚಿನ್ನ ಕಳೆದುಕೊಂಡ ವ್ಯಕ್ತಿ ಶ್ರೀ ಹರ ಎಂದು ತಿಳಿದು ಬಂದಿದೆ.
ದರೋಡೆಕೋರರು ಇನ್ನೋವಾ ಕಾರಿನಲ್ಲಿ ಬಂದು ದರೋಡೆ ಮಾಡಿ ಹೋಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಪ್ರಕರಣದ ಸಾರಾಂಶ : ಫಿರ್ಯಾದುದಾರರಾದ ಶ್ರೀ ಹರಿ, ವೃತ್ತಿ; ಜ್ಯುವೆಲ್ಲರಿ ಶಾಪ್, ಇವರನ್ನು ಯಾರೋ ಆರು ಜನ ಆಪಾದಿತರು ಫಿರ್ಯಾದುದಾರರ ಬಳಿ ಇರುವ 350 ಗ್ರಾಂ ತೂಕದ ಬಂಗಾರದ ಗಟ್ಟಿಯನ್ನು ದರೋಡೆ ಮಾಡುವ ಉದ್ದೇಶದಿಂದ ದಿನಾಂಕ; 13-08-2025 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಮಂಗಳೂರು ಸೆಂಟ್ರಲ ರೇಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೊಟೆಲ್ ಬಳಿ ಆಟೋ ಕಾಯುತ್ತಿದ್ದ ಫಿರ್ಯಾದುದಾರರಿಗೆ, ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಬೇಕು ತಮ್ಮೊಂದಿಗೆ ಬನ್ನಿ ಅಂತಾ ಗದರಿಸಿ, ಫಿರ್ಯಾದುದಾರರನ್ನು ಹಿಡಿದುಕೊಂಡು ಬಲವಂತವಾಗಿ 24ಬಿಹೆಚ್8102ಜಿ ಎಂಬ ನಂಬರ್ ಬರೆದುಕೊಂಡಿರುವ ಬಿಳೆ ಬಣ್ಣದ ಇನ್ನೋವಾ ಕಾರಿನ ಮೇಲೆ ಹಾಕಿಕೊಂಡು, ಫಿರ್ಯಾದುದಾರರ ಬಳಿ ಇದ್ದ 35,00,000/- ರೂಪಾಯಿ ಬೆಲೆ ಬಾಳುವ 350 ಗ್ರಾಂ ತೂಕದ ಶುದ್ಧ ಬಂಗಾರದ ಗಟ್ಟಿಯನ್ನು ದರೋಡೆ ಮಾಡಿಕೊಂಡು, ಫಿರ್ಯಾದುದಾರರನ್ನು ಕುಮಟಾ ಶಿರಸಿ ರಸ್ತೆಯ ಅಂತ್ರವಳ್ಳಿ ಎಂಬ ಊರ ಬಳಿ ಬಿಟ್ಟು ಹೋಗಿರುವುದು ಎಂಬಿತ್ಯಾದಿಯಾಗಿದೆ.