August 19, 2025
WhatsApp Image 2025-08-19 at 3.03.37 PM

ಬೆಂಗಳೂರು: ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರೆ ಸುಜಾತಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವಂತ ದೂರುದಾರೆ ಸುಜಾತ ಭಟ್ ಅವರು, ಎಲ್ಲರೂ ಒಂದೊಂದು ರೀತಿ ತೇಜೋವಧೆ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ. ನನ್ನ ನೋವು ನನಗೆ ಗೊತ್ತು ಎಂಬುದಾಗಿ ಕಿಡಿಕಾರಿದರು.

ಇದರಲ್ಲಿ ಫೇಕ್ ಯಾವುದೂ ಇಲ್ಲ. ನಾನು ರಂಗಪ್ರಸಾದ್ ಅವರ ಮನೆಯಲ್ಲಿ ಇದ್ದಿದ್ದು ನಿಜ. ನಾನು ಕೇಳಿರೋದು ನನ್ನ ಮಗಳ ಅಸ್ಥಿ. ಅನಾಮಧೇಯ ವ್ಯಕ್ತಿ ಬಂದು ಶವಗಳನ್ನು ಹೂತಿದ್ದಾಗಿ ಹೇಳಿದ್ದ. ನನ್ನ ಮಗಳ ಅಸ್ಥಿ ಪಂಜರ ಸಿಕ್ಕಿದ್ರೆ ಕೊಡಿ ಎಂದು ಕೇಳಿದ್ದೆ ಎಂದರು.

ಪೋಟೋದಲ್ಲಿ ಇರುವವಳು ನನ್ನ ಮಗಳು. ಅದು ಸತ್ಯ. ಒಬ್ಬ ವ್ಯಕ್ತಿ ರೀತಿ ತುಂಬಾ ಜನ ಇರುತ್ತಾರೆ ಅಲ್ವ? ನನ್ನ ಭಾವ ಈ ಆರೋಪಗಳನ್ನು ಮಾಡ್ತಿದ್ದಾರೆ. ನಾನು ಎಲ್ಲಿ ದಾಖಲೆ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದರು.

ರಿಪ್ಪನ್ ಪೇಟೆಯಲ್ಲಿ ಪ್ರಭಾಕರ್ ಜೊತೆ ಇದ್ದಿದ್ದು ನಿಜ. ಪ್ರಭಾಕರ್ ನನ್ನ ಗಂಡ ಅಲ್ಲ. ನಾನು ಕಷ್ಟದಲ್ಲಿ ಇರುವಾಗ ಅವರು ನೋಡಿಕೊಂಡಿದ್ದಾರೆ. ಯಾರ ಜೊತೆಗೂ ಇರಬಾರದು ಅಂತ ಇದೆಯಾ ಎಂದು ಪ್ರಶ್ನಿಸಿದರು.

ರಿಪ್ಪನ್ ಪೇಟೆಯಿಂದ ಕೋಲ್ಕತ್ತಾಗೆ ಹೋಗಿ ಬರುತ್ತಿದ್ದೆ. ಯಾರಿಗೂ ಗೊತ್ತಿರದಂತೆ ನನ್ನ ಮಗಳನ್ನು ಬೆಳೆಸಿದ್ದೆ. ನನ್ನ ತಂದೆಯ ಕುಟುಂಬದಿಂದ ಬೆದರಿಕೆಯಿತ್ತು. ಕುಟುಂಬಕ್ಕೆ ಗೊತ್ತಿಲ್ಲದೇ ಅನಿಲ್ ಭಟ್ ಎಂಬುವರ ಮದುವೆಯಾಗಿದ್ದೆ. ನನ್ನ ಮಗಳು ಮೃತಪಟ್ಟಿರುವುದು ನನಗೆ ಗೊತ್ತು. ದಾಖಲೆ, ಸಾಕ್ಷಿಗಳನ್ನು ಟೀಂ ಒಂದು ನಾಶ ಮಾಡಿದೆ. ಜನನ ಪ್ರಮಾಣ ಪತ್ರ ನನ್ನ ಬಳಿ ಇದೆ ಎಂಬುದಾಗಿ ದೂರುದಾರೆ ಸುಜಾತ ಭಟ್ ತಿಳಿಸಿದ್ದಾರೆ.

About The Author

Leave a Reply