
ಬಂಟ್ವಾಳ: ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಿಸಿ ರೋಡ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ನಡೆಸಿಕೊಟ್ಟರು.

ನೂತನ ಜಿಲ್ಲಾಧ್ಯಕ್ಷೆಯಾಗಿ ಶಿನೀರಾ, ಪ್ರಧಾನ ಕಾರ್ಯದರ್ಶಿಯಾಗಿ ಝಹನ ಬಂಟ್ವಾಳ, ಉಪಾಧ್ಯಕ್ಷೆಯಾಗಿ ಝಾಹಿದಾ, ಕಾರ್ಯದರ್ಶಿಯಾಗಿ ಝೈನಬಾ ಹಾಗೂ ಫೌಝಿಯಾ ಆಲಂಪಾಡಿ, ಕೋಶಾಧಿಕಾರಿಯಾಗಿ ಫಾಹಿನಾ, ಸಮಿತಿ ಸದಸ್ಯರಾಗಿ ನೌರೀನ್ ಆಲಂಪಾಡಿ, ಸಾಜಿದ, ಮರಿಯಮ್ಮ ಟಿ ಎಸ್, ಗೌಸಿಯಾ, ಝೈಬುನ್ನಿಸಾ ಆಯ್ಕೆಯಾದರು.
ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, WIM ಜಿಲ್ಲಾ ಉಸ್ತುವಾರಿ ಹನೀಫ್ ಪೂಂಜಾಲ್ ಕಟ್ಟೆ, WIM ಕಾರ್ಡಿನೇಟರ್ ಹಾಗೂ SDPI ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಬಂಟ್ವಾಳ ಉಪಸ್ಥಿತರಿದ್ದರು.