
ಬಂಟ್ವಾಳ ತಾಲೂಕು ಸುಗ್ರಾಮ ಜಾಗೃತಿ ವೇದಿಕೆಯ ವತಿಯಿಂದ ಮಹಿಳೆಯರ ಸಬಲೀಕರಣ ಹಿತದೃಷ್ಟಿಯಿಂದ ಮಹಿಳೆಯರಿಗೆ ಸರಕಾರಗಳಿಂದ ಸವಲತ್ತುಗಳು,ಉದ್ಯೋಗ ಖಾತರಿಯಿಂದ ಗ್ರಾ.ಪಂಚಾಯತಿನಿಂದ ಸಿಗುವ ಸವಲತ್ತುಗಳು,ವಾರ್ಡ್ ಸಭೆ ,ಗ್ರಾಮ ಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಪ್ರಶ್ನಿಸುವ ಅಧಿಕಾರ,ಮಹಿಳಾ ದೌರ್ಜನ್ಯ ಇನ್ನಿತರ ವಿಷಯಗಳ ಕುರಿತು ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ-ನಾರ್ಶ ವಾರ್ಡಿನ ನಾರ್ಶ ಅಂಗನವಾಡಿ ಕೇಂದ್ರದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಅದ್ಯಕ್ಷತೆಯಲ್ಲಿ ನಡೆಯಿತು.ದ.ಕ. ಜಿಲ್ಲಾ ಸುಗ್ರಾಮ ಜಾಗೃತಿ ಸಂಯೋಜಕರಾದ ಚೇತನ್ .ಪಿ.ಮಾಹಿತಿ ಕಾರ್ಯಗಾರ ನಡೆಸಿದರು. ಈ ಹಿಂದೆ ತಾಳಿತ್ತನೂಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಿಳಿಸಿದಂತೆ ವಾರ್ಡಿನ ಇನ್ನೊಂದು ಬಹುಮುಖ್ಯ ಜನಸಂಖ್ಯೆಯ ಭಾಗವಾದ ನಾರ್ಶದಲ್ಲಿ ಕಾರ್ಯಗಾರವನ್ನು ನಾರ್ಶದಲ್ಲಿ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಹಿಳಾ ಸಾಂತ್ವಾನ ಕೇಂದ್ರ ಬಂಟ್ವಾಳ ಇದರ ಪ್ರಶಾಂತ್ ಅಂಗನವಾಡಿ ಕಾರ್ಯಕರ್ತೆ ಜಯಂತಿ,ಬಾಲವಿಕಾಸ ಸಮಿತಿಯ ಅದ್ಯಕ್ಷರಾದ ಬುಶ್ರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಸ್ಮ ಹಸೈನಾರ್ ಮಾತಾಡಿ ಗ್ರಾ.ಪಂಚಾಯತಿನಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಸ್ಥಳೀಯ ವಾರ್ಡಿನ ಮತದಾರರೊಂದಿಗೆ ಹಂಚಿಕೊಂಡರು.ಅಂಗನವಾಡಿ ಮೆಲ್ವಿಚಾರಕಿ ಜಯಂತಿ ಸ್ವಾಗತಿಸಿ ಧನ್ಯವಾದ ತಿಳಿಸಿದರು.