August 24, 2025
WhatsApp Image 2025-08-23 at 9.52.11 PM

ಮಂಗಳೂರು: ಇಲ್ಲಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವು ಇಂದು ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿನಡೆಯಿತು. ಎಸ್‌ವೈಎಸ್‌ ದ.ಕ. ಜಿಲ್ಲಾ ಉಪಾಧ್ಯಕ್ಷ ಮೌಲಾನಾ ಸಿರಾಜುದ್ದೀನ್‌ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಎಸ್‌ಕೆಎಸ್‌ಎಸ್‌ಎಫ್‌, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಅನೀಸ್‌ ಕೌಸರಿ ವಧು ವರರಿಗೆ ಸಂದೇಶ ನೀಡಿದರು. ಉದ್ಯಮಿಗಳಾದ ವಿ.ಕೆ. ಅಬ್ದುಲ್‌ ಖಾದರ್‌ ಬದ್ರಿಯಾ, ಅಬ್ದುಲ್‌ ರಹಿಮಾನ್‌ ಕರ್ನೀರೆ, ಮೋನು ಹಾಜಿ ಪುತ್ತೂರು ಮತ್ತು ಎಂ.ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ನ ಸ್ಥಾಪಕ ರಶೀದ್‌ ವಿಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಅಭಿನಂದನೆ:
ಕಳೆದ 14 ವರ್ಷಗಳಿಂದ ಅಲ್‌ ವಫಾ ಚಾರಿಟೆಬಲ್‌ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಮರ್‌ ಯು.ಹೆಚ್.‌ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕ ಗೊಂಡಿರುವ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಅಭಿನಂದಿಸಲಾಯಿತು.

ಅಲ್ ವಫಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮರ್‌ ಯು.ಹೆಚ್.‌ ಸ್ವಾಗತಿಸಿದರು. ಟ್ರಸ್ಟಿಗಳಾದ ಬಿ.ಎ. ಮುಹಮ್ಮದ್‌ ಅಲಿ ಕಾರ್ಯಕ್ರಮ ನಿರೂಪಿಸಿ, ಕೆ.ಎಸ್.‌ ಅಬೂಬಕರ್‌ ಧನ್ಯವಾದವಿತ್ತರು. ಟ್ರಸ್ಟ್‌ನ ಕೋಶಾಧಿಕಾರಿ ಎಫ್.‌ ಎಂ. ಬಶೀರ್‌, ಟ್ರಸ್ಟಿಗಳಾದ ಬಿ.ಎ. ಶಕೂರ್‌, ವಿ.ಕೆ. ಇಸ್ಮಾಯಿಲ್‌, ಹಮೀದ್‌ ಅತ್ತೂರು, ಮುಹಮ್ಮದ್‌ ಪಿ., ಸಿರಾಜುಲ್‌ ಹಖ್‌, ಪಿ.ಪಿ. ಮಜೀದ್‌ ಮತ್ತು ಬೆಳ್ಳೆಚ್ಚಾರ್‌ ಮುಹಮ್ಮದ್ ಉಪಸ್ಥಿತರಿದ್ದರು.

About The Author

Leave a Reply