November 8, 2025
WhatsApp Image 2025-08-27 at 9.39.25 AM

ಕಾರ್ಕಳ: ಕುಂಟಲ್ಪಾಡಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿಯನ್ನು ಬೆಳ್ತಂಗಡಿ ತಾಲೂಕು ನಾಡ ನಿವಾಸಿ ಪರೀಕ್ಷಿತ್(44) ಎಂದು ಗುರುತಿಸಲಾಗಿದ್ದು, ಮಹಿಳೆಯೊಬ್ಬರ ಗೆಳೆತನದ ವಿಚಾರವಾಗಿ ಈ ಕೊಲೆ ನಡೆದಿದೆ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಅಗಸ್ಟ್ 26 ರ ಮುಂಜಾನೆ ವೇಳೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಗಳೂರು ಮೂಲದ ನವೀನ್ ಪೂಜಾರಿ ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇಂದು ಬೆಳಗಿನ ಜಾವ ನವೀನ್ ಪೂಜಾರಿ ಮೃತದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಇವರು ಚೂರಿ ಇರಿತರಿಂದ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ. ತನಿಖೆ ಮುಂದುವರೆಸಿ, ಸಿಸಿಟಿವಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅವರನ್ನು ಪರೀಕ್ಷಿತ್ ಎಂಬಾತ ಕೊಲೆ ಮಾಡಿರುವುದು ತಿಳಿದುಬಂದಿದೆ. ಅದರಂತೆ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಬಂಧಿತ ಆರೋಪಿ ಪರೀಕ್ಷಿತ್ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈತ ತನ್ನ ಪತ್ನಿಯಿಂದ ವಿಚ್ಛೇದನೆ ಪಡೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿ ಕೊಂಡಿದ್ದಾನೆ. ಅದೇ ರೀತಿ ನವೀನ್ ಪೂಜಾರಿ ಪತ್ನಿ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಈತ ಅವರಿಂದ ನಾಲ್ಕೈದು ವರ್ಷಗಳಿಂದ ದೂರು ಇದ್ದು ವಾಸ ಮಾಡಿಕೊಂಡಿದ್ದಾರೆ.
ಪರೀಕ್ಷಿತ್‌ಗೆ ಪರಿಚಯ ಇರುವ ಮಹಿಳೆ ಜೊತೆ ನವೀನ್ ಪೂಜಾರಿ ಮಾತನಾಡುತಿದ್ದರು ಮತ್ತು ಗೆಳೆತನವನ್ನು ಬೆಳೆಸಿ ಆತ್ಮೀಯರಾಗಿದ್ದರು. ಇದು ಪರೀಕ್ಷಿತ್ ಇಷ್ಟ ಇಲ್ಲವಾಗಿತ್ತು. ಈ ವಿಚಾರದಲ್ಲಿ ಇವರ ಮಧ್ಯೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ನವೀನ್ ಪೂಜಾರಿಯನ್ನು ಪರೀಕ್ಷಿತ್ ಕೊಲೆ ಮಾಡಿದ್ದಾನೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

About The Author

Leave a Reply