August 28, 2025
WhatsApp Image 2025-08-28 at 12.08.05 PM

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 22.40 ಲಕ್ಷ ವಂಚಿಸಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದಾವಣಗೆರೆ ಸೆನ್ ಠಾಣೆ ಪೊಲೀಸರಿಂದ ಅರುಣ್ ಕುಮಾರ್ (35) ಎನ್ನುವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದಾವಣಗೆರೆ ಮೂಲದ ಶಿಕ್ಷಕನಿಗೆ 22.40 ಲಕ್ಷ ರೂಪಾಯಿ ವಂಚನೆ ಎಸಗಿದ್ದು, ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ಫ್ರೀಜ್ ಮಾಡುವಂತೆ ಮನವಿ ಮಾಡಿದ್ದಾರೆ. ಕೋರಟಿಕೆರೆ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೆ ಇಬ್ಬರು ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋರಟಿಕೆರೆ ಮೂಲದವರು ಮಾರ್ಚ್ 12 ರಂದು ಬ್ಲೂಡಾರ್ಟ್ ಕೊರಿಯರ್ ಹೆಸರಿನಲ್ಲಿ ಮುಂಬೈನಿಂದ ದುಬೈಗೆ ಕಳುಹಿಸುತ್ತಿದ್ದ ಪಾರ್ಸಲ್ನಲ್ಲಿ ಡ್ರಗ್ಸ್ ಸಿಕ್ಕಿದೆ. ನಿಮಗೆ ತಿಂಗಳಿಗೆ 20 ಲಕ್ಷ ಆದಾಯವಿದೆ ಎಂದು ಕರೆ ಮಾಡಿದ್ದರು. ಪಾರ್ಸಲ್ ನಲ್ಲಿ ಡ್ರಗ್ಸ್ ಸಿಕ್ಕಿದೆ ಡಿಜಿಟಲ್ ಅರೆಸ್ಟ್ ಮಾಡ್ತೇವೆ ಎಂದು ಶಿಕ್ಷಕನನ್ನು ಬೆದರಿಸಿ ಹಣ ಪಡೆದಿದ್ದರು.

ಶಿಕ್ಷಕನ ಬ್ಯಾಂಕ್ ಖಾತೆ ಮಾಹಿತಿ ಪಡೆದು 22.40 ಲಕ್ಷ ವಂಚಿಸಿದ್ದರು . ವಂಚನೆಗೆ ಒಳಗಾದ ಶಿಕ್ಷಕನ ದೂರು ಆದರಿಸಿ ಸೆನ್ ಪೊಲೀಸರು ಶೋಧ ನೆಡೆಸಿದ್ದು ಡಿವೈಎಸ್ಪಿ ಬಂಗಾಳಿ ನಾಗಪ್ಪ ನೇತೃತ್ವ ತಂಡದಿಂದ ಅಥಣಿಕೆ ನಡೆಸಲಾಗಿದ್ದು ಕಾರ್ಯಾಚರಣೆ ನಡೆಸಿ ಅರುಣ್ ಕುಮಾರ್ ನನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ. ಇನ್ನು ಪ್ರಕರಣ ಸಂಬಂಧ ಮತ್ತಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

About The Author

Leave a Reply