

ಹಂಗಾಮಿ ಡಿಜಿಪಿ ಐಜಿಪಿ ಯಾಗಿದ್ದ ಡಾ. ಎಂ. ಎ ಸಲೀಂ ಅವರನ್ನು ರಾಜ್ಯ ಸರ್ಕಾರ ಕಾಯಂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಿದೆ.
ಕಳೆದ ಮೇ 21ರಂದು ನಿವೃತ್ತಿ ಹೊಂದಿದ್ದ ಹಿಂದಿನ ಅಲೋಕ್ ಮೋಹನ್ ಅವರಿಂದ ತೆರವಾದ ಸ್ಥಾನಕ್ಕೆ ಅದೇ ದಿನ ಸಿಐಡಿ ಡಿಜಿಯಾಗಿದ್ದ ಎಂ ಎ ಸಲೀಂ ಅವರನ್ನು ಹಂಗಾಮಿ ಡಿಜಿಪಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ ಇದೀಗ ಸಲೀಂ ಅವರನ್ನು ನಿವೃತ್ತಿ ವರೆಗೂ (2026 ಜೂನ್ ಅಂತ್ಯದವರೆಗೆ ) ಡಿಜಿ ಐಜಿಪಿಯಾಗಿ ಮುಂದುವರಿಯುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಇನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕವಾಗಿರುವ ಡಾ. ಎಂ. ಎ ಸಲೀಂ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿ ಶುಭ ಹಾರೈಸಿದರು.






