October 12, 2025
WhatsApp Image 2025-07-18 at 2.23.56 PM

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಾಗಿ ಬಿಜೆಪಿ ಧರ್ಮಸ್ಥಳ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಬಿಜೆಪಿ ಧರ್ಮಸ್ಥಳ ಚಲೋಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆ ಬಿಜೆಪಿ ಧರ್ಮಸ್ಥಳ ಚಲೋ ಪಾದಯಾತ್ರೆ ಹಮ್ಮಿಕೊಂಡಿದೆ. ಅವರು ಯಾತ್ರೆ ಹೋದರೆ ಹೋಗಲಿ ಪಾಪ. ಧರ್ಮಸ್ಥಳದ ಹೆಗ್ಗಡೆಯವರೇ ಸ್ವಾಗತ ಮಾಡಿದ್ದಾರೆ. ಸತ್ಯ ಹೊರಬೇರಬೇಕು ಅಂತ ಎಸ್ಐಟಿ ಮಾಡಿದ್ದೇವೆ ಇಲ್ಲದಿದ್ದರೆ ಧರ್ಮಸ್ಥಳದ ಮೇಲೆ ತೂಗುಗತ್ತಿ ಇರುತ್ತದೆ ಅನುಮಾನ ಹೋಗಲಾಡಿಸಲು ಎಸ್ಐಟಿ ಮಾಡಲಾಗಿದೆ ಎಂದು ತಿಳಿಸಿದರು.

About The Author

Leave a Reply