

ಪುತ್ತೂರು: ವ್ಯಕ್ತಿಯೋರ್ವರಿಗೆ ಸೇರಿದ ಜಮೀನಿನ ಆರ್‌ಟಿಸಿಯನ್ನು ನಕಲಿ ದಾಖಲೆ ಸೃಷ್ಟಿಸಿ ನ್ಯಾಯಲಯದಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿದ ಘಟನೆ ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್. ಅಬೂಬಕ್ಕರ್, ಬಿನ್. ಅಹ್ಮದ್ ಬ್ಯಾರಿ (59),ನೆಕ್ಕಿಲಾಡಿ ಗ್ರಾಮ, ಪುತ್ತೂರು ತಾಲೂಕು, ಎಂಬವರು ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 33//9 ರಲ್ಲಿ 0.08.50 ಎಕ್ರೆ ಜಮೀನಿನ ಮಾಲಿಕನಾಗಿರುತ್ತಾರೆ. ಅವರು ಜಮೀನಿಗೆ ಸಂಬಂಧಿಸಿ ದಿನಾಂಕ 31.12.2024 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿರುವ ಆರ್‌ಟಿಸಿ ಕೇಂದ್ರದಿಂದ ಅವರ ಹಕ್ಕಿನ ಜಮೀನಿನ ಬಾಬ್ತು ಪಹಣಿ ಪತ್ರವನ್ನು ತೆಗೆದು ನೋಡಿದಾಗ, ಆ ಪಹಣಿ ಪತ್ರದ ಕಾಲಂ 11ರ ಋಣಗಳು ಕಾಲಂನಲ್ಲಿ ಎಂಆರ್‌ಟಿ4/2024-2025 Spl. Case NO. ನಂಬ್ರ 34/2025(Crime No. 30/2021 of and N Crime PS) ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ಇವರಿಗೆ ರೂ. 2,00,000/- ಕ್ಕೆ ಮುಟ್ಟುಗೋಲು ಎಂಬುದಾಗಿ ದಾಖಲಾಗಿರುತ್ತದೆ.
ಈ ಬಗ್ಗೆ ಎನ್. ಅಬೂಬಕ್ಕರ್‌ರವರು ಮ್ಯೂಟೇಷನ್ ರಿಜಿಸ್ಟ್ರಾರ್ ಪ್ರತಿಯನ್ನು ಸಹ ಪಡಕೊಂಡಿದ್ದು ಅದರಲ್ಲೂ ಸಹ ಇದೇ ರೀತಿ ದಾಖಲು ಇರುತ್ತದೆ. ಆ ಬಳಿಕ ಅವರು ಸೈಬರ್‌ನ ಇ-ಕೋರ್ಟ್ ಸೇವೆಗಳ ವಿಭಾಗದಲ್ಲಿ ಕೇಸ್‌ನ ಬಗ್ಗೆ ವಿವರವನ್ನು ನೋಡಿದಾಗ ಮೇಲ್ಕಾಣಿಸಿದ ಕೇಸಿನ 5ನೇ ಆರೋಪಿ ಸಯ್ಯದ್ ಮೊಹಮ್ಮದ್ ಯಾನೆ ಸಯ್ಯದ್ ಮೊಹಮ್ಮದ್ ನಾಸಿಮ್ ಎಂಬವರ ಪರವಾಗಿ ವಕೀಲರು 2 ಜನ ಜಾಮೀನುದಾರರನ್ನು ಹಾಜರುಪಡಿಸಿದ್ದು, ಆ ಪೈಕಿ ಒಬ್ಬ ಜಾಮೀನುದಾರರಾಗಿ ಅಬೂಬಕ್ಕರ್ (32) ತಂದೆ: ಹಮ್ಮದ್ ಬ್ಯಾರಿ, ವಾಸ: ನಂ.4-67ಎ, ಗುನ್ಫೂನಾರ್ ಪಡ್ನೂರು ಅಂಚೆ, ಪುತ್ತೂರು ತಾಲೂಕು ದ.ಕ ಎಂಬವರು ಹಾಜರುಪಡಿಸಿದ ಆರ್‌ಟಿಸಿ ಯು ಎನ್. ಅಬೂಬಕ್ಕರ್‌ರವರ ಬಾಬ್ತು ಹಕ್ಕಿನ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 32//9 ರಲ್ಲಿ 0.08.50 ಎಕ್ರೆ ಜಮೀನಿನ ಆರ್‌ಟಿಸಿಯಾಗಿರುತ್ತದೆ.
ಈ ಬಗ್ಗೆ ಮಾನ್ಯ ನ್ಯಾಯಾಲಯದ 14-06-2024 ರ ಆದೇಶದ ಪ್ರತಿಯ ಹಾಳೆಯಲ್ಲಿ ಎನ್. ಅಬೂಬಕ್ಕರ್‌ರವರ ಹಕ್ಕಿನ ಜಮೀನನ್ನು ಆಧಾರವಾಗಿಸಿದ ವ್ಯಕ್ತಿಯ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ, ಎನ್. ಅಬೂಬಕ್ಕರ್‌ರವರ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ ತಾಳೆ ಬರುವುದು ಕಂಡು ಬರುವುದಿಲ್ಲ. ಆರೋಪಿ ಅಬೂಬಕ್ಕರ್(32) ವರ್ಷ, ತಂದೆ: ಹಮ್ಮದ್ ಬ್ಯಾರಿ, ವಾಸ: ನಂ.4-67ಎ, ಗುನ್ಫೂನಾರ್ ಪಡ್ನೂರು ಅಂಚೆ, ಪುತ್ತೂರು ತಾಲೂಕು ಎಂಬಾತನು ಎನ್. ಅಬೂಬಕ್ಕರ್‌ರವರ ಹೆಸರಿನಲ್ಲಿರುವ ಆರ್‌ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ಹೇಳಿ ನಂಬಿಸಿ, ನಟಿಸಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿರುತ್ತಾರೆ. ಈ ಬಗ್ಗೆ ಆರೋಪಿ ಅಬೂಬಕ್ಕರ್ ಎಂಬತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 84/2025 ಕಲಂ: 417, 419 IPC ಯಂತೆ ಪ್ರಕರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.






