December 17, 2025
WhatsApp Image 2025-12-16 at 9.30.01 AM

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನು ಪ್ರಿಯಕನೊಬ್ಬ ಆಕೆಯ ಗಂಡನಿಗೆ ಕಳುಹಿಸಿದ್ದಾನೆ. ಮುಂದೆ ಆಗಿದ್ದೇನು ಅಂತ ಮುಂದೆ ಸುದ್ದಿ ಓದಿ.. 

4 ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದಂತ ಆ ಇಬ್ಬರು ಮದುವೆಯಾಗೋದಕ್ಕೂ ನಿರ್ಧರಿಸಿದ್ದರು. ಆದರೇ ಇದಕ್ಕೆ ಜಾತಿ ಅಡ್ಡಬಂದು, ಪ್ರೀತಿ ಕೊನೆಗೊಂಡಿತ್ತು. ಯುವತಿ ತನ್ನ ಮನೆಯವರು ತೋರಿಸಿದಂತ ಯುವಕನನ್ನು ಮದುವೆಯಾಗಿ, ಗಂಡನ ಜೊತೆಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಳು.

ತನ್ನ ಪ್ರೇಯಸಿ ಬೇರೆಯ ಯುವಕನನ್ನು ಮದುವೆಯಾದಳು ಎಂಬ ಸಿಟ್ಟಿನಿಂದ ಪ್ರಿಯತಮ ಮಾತ್ರ ಮಾಡಿದ್ದು, ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನೇ ಗಂಡನಿಗೆ ಕಳುಹಿಸಿದ್ದಾಗಿದೆ. ಇದರಿಂದ ಕೆರಳಿ ಕೆಂಡವಾದಂತ ಆಕೆಯ ಗಂಡ, ತಾನು ಕಟ್ಟಿದಂತ ತಾಳಿ ಕಿತ್ತು ಮನೆಯಿಂದ ವಿವಾಹಿತೆಯನ್ನು ಹೊರ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಅಲ್ಲಿಂದ ನೇರವಾಗಿ ಇದಕ್ಕೆ ಕಾರಣವಾದಂತ ಪ್ರಿಯಕರನ ಮನೆಯ ಮುಂದೆ ನ್ಯಾಯ ಕೊಡಿಸುವಂತೆ ಧರಣಿ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಪಲಿಚೆರ್ಲು ಗ್ರಾಮ ಅಂಬರೀಶ್ ಮನೆಯ ಮುಂದೆ ಕೆಂಚನಹಳ್ಳಿ ಗ್ರಾಮದ ವಿವಾಹಿತೆ ಧರಣಿ ಪ್ರತಿಭಟನೆ ನಡೆಸುತ್ತಿದ್ದಾಳೆ. ವಿವಾಹಿತೆ ಧರಣಿ ನಡೆಸುತ್ತಿದ್ದಂತೇ ಪ್ರಿಯಕರ ಅಂಬರೀಶ್ ಮನೆಯಿಂದ ಪರಾರಿಯಾಗಿದ್ದಾನೆ. ಇತ್ತ ವಿವಾಹಿತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ತೆರಳಿ, ಅಂಬರೀಶ್ ವಿರುದ್ದ ದೂರು ನೀಡಿದ್ದಾಳೆ.

About The Author

Leave a Reply