January 7, 2026
WhatsApp Image 2026-01-06 at 11.08.56 AM

ಓದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕಿ ಒಬ್ಬರು ಮನಸೋ ಇಚ್ಚೆ ಥಳಿಸಿರುವ ಘಟನೆ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಹರ್ಷಿಯ ತಸ್ಕಿನ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

3ನೇ ತರಗತಿ ಬಾಲಕ ಓದದೆ ಶಾಲೆಗೆ ಬಂದಿದ್ದ ಇದರಿಂದ ಕೋಪದಲ್ಲಿ ಹರ್ಷಿಯಾ ತಸ್ಕಿನ್ ಬಾಲಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಮೈತುಂಬ ಬಾಸುಂಡೆ ಬರುವ ರೀತಿ ಮೂರನೇ ತರಗತಿ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದಾರೆ. ಶಿಕ್ಷಕಿ ಹರ್ಷಿಯ ತಸ್ಕಿನ್ ವಿರುದ್ಧ ಪೋಷಕರು ಕ್ರಮಕ್ಕೆ ಒತ್ತಾಯಿಸಿದ್ದು ಗಾಯಗೊಂಡ ಬಾಲಕನಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

About The Author

Leave a Reply