January 8, 2026
WhatsApp Image 2026-01-06 at 1.29.32 PM

ಉಡುಪಿ ಶಿರೂರು ಪರ್ಯಾಯ ಉತ್ಸವಕ್ಕೆ ಜಿಲ್ಲಾ ಮುಸ್ಲಿಂ ಸ್ನೇಹ ಸಮಿತಿಯು ನೀಡಲಿರುವ ಸಹಕಾರದ ಕುರಿತು ಧರ್ಮ – ಧರ್ಮ,ಜನಾಂಗಗಳ ಮಧ್ಯೆದ್ವೇಷ ಬಿತ್ತುವ ಆಕ್ಷೇಪಾರ್ಹ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. 

ಕಾರ್ಕಳ ಅಂಬಡೆ ಕಲ್ಲು ನಿವಾಸಿ ಸುಧಾಕರ್ (37)ಬಂಧಿತ ಆರೋಪಿ.  ಜ.3ರಂದು “ Sudeep Shetty Nitte “ ಎಂಬ ಫೇಸ್‌ ಬುಕ್‌ ಖಾತೆಯಲ್ಲಿ  “ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮೀತಿಯವರಿಗೆ ಎಷ್ಟೋ ಕಾರ್ಯಗಳಿವೆ.ಅದನ್ನ ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ “ಧಫ್ ದುಫ್ ಡಮ್ “ಅಂತ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ.

ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿದ ಕೂಡಲೆ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ …. ಬಾಕಿದ್ದನ್ನ ಹೇಳಬೇಕಾದವರು ಹೇಳಿದ್ದಾರೆ”  ಎಂಬ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಅಪರಾಧ ಕ್ರಮಾಂಕ  01/2026 ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023   ರಂತೆ ಪ್ರಕರಣ ದಾಖಲಾಗಿತ್ತು.  ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಲಯವು ಆರೋಪಿತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Leave a Reply