February 12, 2026
WhatsApp Image 2026-02-12 at 9.28.53 AM

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದು ಚೂರಿ ಇರಿತ ಸಂಭವಿಸಿದ ಘಟನೆ ವಿಟ್ಲದ ಖಾಸಗಿ ಐಟಿಐ ಕಾಲೇಜೊಂದರಲ್ಲಿ ಬುಧವಾರ ನಡೆದಿದೆ.

ವಿಟ್ಲದ ಖಾಸಗಿ ಐಟಿಐ ಒಂದರಲ್ಲಿ ವಿದ್ಯಾರ್ಥಿಗಳ ನಡುವೆ ಚೂರಿ ಇರಿತ ನಡೆದಿದೆ. ಆರಂಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಬಳಿಕ ಚೂರಿ ಇರಿತ ಸಂಭವಿಸಿದ್ದು, ಘಟನೆಯಿಂದಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜೋರಾಗಿ ಕೆಮ್ಮಿದ ಎಂಬ ಕಾರಣಕ್ಕೆ ನೆರೆಮನೆಯವರಿಂದಲೇ ಯುವಕನ ಕೊಲೆ ಇದೇ ವೇಳೆ ಗಲಾಟೆ ಬಿಡಿಸಲು ಹೋದ ವಿದ್ಯಾರ್ಥಿಗೂ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

About The Author

Leave a Reply