

ಗುರುಪುರ, ಕೈಕಂಬ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕೈಕಂಬ ಪೇಟೆಯಲ್ಲಿ ಇತ್ತೀಚೆಗೆ ನಿರ್ಮಾಣವಾಗುತ್ತಿರು ತಡೆಗೋಡೆ ಮಾದರಿಯ ಮೇಲ್ಸೇತುವೆ ನಿರ್ಮಾಣ ಬದಲು ತೆರೆದ ಮೇಲ್ಸೇತುವೆಯನ್ನು ಕೈಕಂಬ ಮಾರ್ಕೇಟ್ ವರೆಗೆ ವಿಸ್ತರಿಸಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತೆರೆದ ಮಾದರಿಯ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹಿಸಿ, ಕೈಕಂಬ ನಾಗರಿಕ ಹೋರಾಟ ಸಮಿತಿ ವತಿಯಿಂದ ನಾಳೆ (16-02-2026) ಬೆಳಿಗ್ಗೆ 10:00 ಗಂಟೆಗೆ ಕೈಕಂಬ ಜಂಕ್ಷನ್‌ನಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.
ಈ ನಿರ್ಧಾರವನ್ನು ಇಂದು ನಡೆದ ಸಭೆಯಲ್ಲಿ ಏಕಾಭಿಪ್ರಾಯಲ್ಲಿ ಅಂಗೀಕರಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಸ್ಥಳೀಯರ ಅಭಿಪ್ರಾಯದಂತೆ, ಪಿಲ್ಲರ್‌ಗಳ ಮೇಲೆ ತೆರೆದ ಮೇಲ್ಸೇತುವೆ ನಿರ್ಮಾಣವಾಗದಿದ್ದರೆ ವ್ಯಾಪಾರ ಚಟುವಟಿಕೆಗಳಿಗೆ, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕಿನ ಬೇಡಿಕೆಗೆ ಬೆಂಬಲ ನೀಡುವಂತೆ ಸಮಿತಿ ಮನವಿ ಮಾಡಿದೆ.






