February 18, 2026
WhatsApp Image 2026-02-18 at 9.13.24 AM

ಮಂಗಳೂರು: ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ರಂಜಾನ್ ಉಪವಾಸ ಆರಂಭಗೊಳ್ಳಲಿದೆ ಎಂಬುದಾಗಿ ಮಂಗಳೂರಿನ ಝೀನತ್ ಫಕ್ಷ್ ಕೇಂದ್ರ ಜಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್ ಎ ರಶೀದ್ ಹಾಜಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು ಕರಾವಳಿ ಜಿಲ್ಲೆಗಳಾದಂತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರದಿಂದ ರಂಜಾನ್ ಉಪವಾಸ ಮಾಸಾಚರಣೆ ಆರಂಭಗೊಳ್ಳಲಿದೆ ಎಂದಿದ್ದಾರೆ.

ಇನ್ನೂ ಚಂದ್ರ ದರ್ಶನವಾಗದ ಕಾರಣ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ರಂಜಾನ್ ಉಪವಾಸ ಗುರುವಾರದಿಂದ ಆರಂಭವಾಗಲಿದೆ ಅಂತ ಶಿವಮೊಗ್ಗ ಸಂಯುಕ್ತ ಖಾಝೀ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಮುಸ್ಲೀಂ ಸಮುದಾಯದ ಪವಿತ್ರ ಹಬ್ಬವಾದಂತ ರಂಜಾನ್ ಮಾಸಾಚರಣೆಯು ಗುರುವಾರದಿಂದ ಕರಾವಳಿ ಜಿಲ್ಲೆಯಾಧ್ಯಂತ ಆರಂಭಗೊಳ್ಳಲಿದೆ.

About The Author

Leave a Reply