February 18, 2026
WhatsApp Image 2026-02-18 at 10.47.14 AM

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸ್ಥಾಪಕ ಅಧ್ಯಕ್ಷರು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ (89) ಅವರು ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕಾಗಿ ಜೈಲು ರೋಡಿನ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ಬಳಿಕ ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜು ಕ್ಯಾಂಪಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ ವಿಜಯಲಕ್ಷ್ಮಿ ರಾವ್, ಪುತ್ರ ಶ್ರೀನಿವಾಸ ವಿವಿ ಸಹ ಕುಲಾಧಿಪತಿಯಾಗಿರುವ ಸಿಎ ಶ್ರೀನಿವಾಸ ರಾವ್, ಪುತ್ರಿ ಪದ್ಮಿನಿ ರಾವ್ ಹಾಗೂ ಅಪಾರ ಬಂಧು-ಬಳಗ ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ. ಹೊಟೇಲ್‌ ಉದ್ಯಮವನ್ನು ಆರಂಭಿಸಿದ್ದ ಅವರು ಬಳಿಕ ಶೈಕ್ಷಣಿಕ ರಂಗ ಹಾಗೂ ವೈದ್ಯಕೀಯ ರಂಗಕ್ಕೆ ಅಪೂರ್ವವಾದ ಸೇವೆಯನ್ನು ಸಲ್ಲಿಸಿದ್ದಾರೆ. ಸಾವಿರಾರು ಮಂದಿಗೆ ಉದ್ಯೋಗ ನೀಡುವಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಅಪಾರ ದೈವಭಕ್ತರಾಗಿದ್ದ ಅವರು ಪ್ರತೀ ವರ್ಷ ವಳಚ್ಚಿಲ್‌ ಬಳಿ ಇರುವ ಕ್ಯಾಂಪಸ್‌ನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡುತ್ತಿದ್ದರು. ಡಾ. ಸಿಎ. ಎ ರಾಘವೇಂದ್ರ ರಾವ್ ನಿಧನಕ್ಕೆ ಹಲವು ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Leave a Reply