

ಸಕಲೇಶಪುರ: ತಾಲ್ಲೂಕಿನ ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಡಗರ ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು.
ಮಸೀದಿ ಖತೀಬರಾದ ಜನಾಬ್ ಬದ್ರುದ್ದಿನ್ ದಾರೀಮಿ ರವರ ನೇತ್ರತ್ವದಲ್ಲಿ ಈದ್ ನಮಾಜ್ ನಂತರ ಕುತುಬ ಹಾಗೂ ಪ್ರಾರ್ಥನೆ ನಡೆಯಿತು.


ನಾವೇಲ್ಲರೂ ಎಲ್ಲಾ ದುಷ್ಟಚಟಗಳಿಂದ,ಎಲ್ಲಾ ದ್ವೇಷ, ಅಸೂಯೆಗಳಿಂದ ದೂರವಿದ್ದು, ಇಸ್ಲಾಂ ಧರ್ಮದ ತತ್ವ,ಅದರ್ಶದಂತೆ ಸಜ್ಜನರಾಗಿರೋಣ ಎಂದು ಖತೀಬರಾದ ಜನಾಬ್ ಬದ್ರುದ್ದಿನ್ ದಾರಿಮಿ ತಮ್ಮ ಈದ್ ಸಂದೇಶವಲ್ಲಿ ನುಡಿದರು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಅದ್ಯಕ್ಷರು, ರಾಜ್ಯ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಸಲೀಂ ಕೊಲ್ಲಹಳ್ಳಿ, ಮದರಸ ಉಸ್ತಾದ್ ಸ್ವಾದೀಕ್ ಹನೀಪಿ ಅಲ್ ಅಶರಿ *ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಜಮಾಹತ್ ಸದಸ್ಯರು, ಯುವಕರು ಹಿರಿಯರು, ಕಿರಿಯರು ಭಾಗವಹಿಸಿದ್ದರು
ತದನಂತರ ಖಬರ್ ಸ್ಥಾನದಲ್ಲಿ ನಡೆದ ಸಾಮೂಹಿಕ ಕೂಟ ಪ್ರಾರ್ಥನೆಯಲ್ಲಿ ಜಮಾಹತ್ ಸದಸ್ಯರು, ಹಿರಿಯ ಕಿರಿಯರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ






