

ಉಳ್ಳಾಲ: ತಾಲೂಕಿನ ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿವಮೊಗ್ಗ ಮೂಲದ 30 ವರ್ಷ ಪ್ರಾಯದ ಮಹಮ್ಮದ್ ಅರ್ಷದ್ ಎಂಬವರು ನಾಪತ್ತೆಯಾಗಿದ್ದು, ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಕೋಟೆ ಗಂಗೂರಿನ ಮೊಹಮ್ಮದ್ ಅರ್ಷದ್ ಪತ್ನಿಯ ಜತೆ ನರಿಂಗಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿ ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಪುತ್ರಿ ಶಿವಮೊಗ್ಗದಲ್ಲಿ ಪತ್ನಿಯ ತಾಯಿ ಮನೆಯಲ್ಲಿ ವಾಸವಾಗಿದ್ದು, ಮಾರ್ಚ್ 23ರಂದು ಮೊಹಮ್ಮದ್ ಅರ್ಷದ್ ಅವರು ಗಾರೆ ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದವರು ಪತ್ನಿಯಲ್ಲಿ ತಾನು ಪುತ್ರಿಯನ್ನು ನೋಡಲು ಶಿವಮೊಗ್ಗಕ್ಕೆ ಹೋಗಬೇಕೆಂದು ಹೇಳಿ ರಾತ್ರಿ 8 ಗಂಟೆಗೆ ಮನೆಯಿಂದ ಹೊರಟಿದ್ದರು. ತಾನು ಶಿವಮೊಗ್ಗಕ್ಕೆ ತಲುಪಿದ ಕೂಡಲೇ ಫೋನ್ ಮಾಡುವುದಾಗಿ ತಿಳಿಸಿದ್ದರು. ಆದರೆ ಮಾರ್ಚ್ 24 ರಂದು ಬೆಳಗ್ಗೆ 6 ಗಂಟೆಯಾದರೂ ಮೊಹಮ್ಮದ್ ಅರ್ಷದ್ ಅವರು ಫೋನ್ ಮಾಡಿಲ್ಲ. ಹಾಗಾಗಿ ಪತ್ನಿ ತನ್ನ ಪತಿ ಮೊಹಮ್ಮದ್ ಅರ್ಷದ್ ಅವರಿಗೆ ಫೋನ್ ಮಾಡಿದಾಗ ಫೋನ್ ಸ್ವೀಚ್ ಆಫ್ ಬರುತ್ತಿತ್ತು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್ ಮೂಲದ ಯುವತಿ ಆತ್ಮಹತ್ಯೆ ಬಳಿಕ ಅವರ ತಾಯಿಯ ಪೋನ್ ಗೆ ಕರೆ ಮಾಡಿ ವಿಚಾರಿಸಿದಾಗ ಮೊಹಮ್ಮದ್ ಅರ್ಷದ್ ಅಲ್ಲಿಗೂ ಕೂಡಾ ಬಂದಿರುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಅವರ ಪತ್ನಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.







