

ಉಪ್ಪಿನಂಗಡಿ: ಇಲ್ಲಿನ ಬಾಳಿಯೂರು ವಸತಿ ಸಂಕೀರ್ಣದ ನಿವಾಸಿ ಸಿದ್ದೀಕ್ ಟೈಲರ್ ಎಂಬವರ ಪುತ್ರಿ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಯು. ಮುಶೀರಾ ಭಾನು (18) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.25ರಂದು ನಿಧನ ಹೊಂದಿದರು.
ಪ್ರತಿಭಾನಿತ್ವ ವಿದ್ಯಾರ್ಥಿನಿಯಾಗಿದ್ದ ಇವರು ಉಪ್ಪಿನಂಗಡಿ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಅಸೌಖ್ಯದಿಂದ ಐದು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಮೃತರು ತಂದೆ, ತಾಯಿ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.







