April 7, 2026
WhatsApp Image 2026-04-07 at 9.48.45 AM

ವಿಟ್ಲ: ಕನ್ಯಾನ ಶ್ರೀ ಮಲರಾಯ ದೈವಸ್ಥಾನ ಜಾತ್ರೋತ್ಸವ ಪ್ರಯುಕ್ತ ನಂದಾದೀಪ ಪ್ರಕಾಶನ ಕುಟ್ಟಿತ್ತಡ್ಕ ಕನ್ಯಾನ ನಾಟಿ ವೈದ್ಯ ಯಕ್ಷಗಾನ, ಭಜನಾ ಕ್ಷೇತ್ರದ ರೂವಾರಿ ದಿವಂಗತ ಸುಬ್ಬ ಬೆಳ್ಚಾಡ ಮಕ್ಕೂರಿ ಇವರ ಸ್ಮರಣಾರ್ಥ ಸನ್ಮಾನ ಬಿರುದು ಪ್ರದಾನ ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮಿಜಿ ಶ್ರೀ ಕ್ಷೇತ್ರ ಕಣಿಯೂರು ಉದ್ಘಾಟನೆಗೈದು ಗ್ರಾಮದ ಪ್ರತಿಭಾವಂತ ಕಲಾವಿದರನ್ನು ಮತ್ತು ಸೇವಾ ಭಕ್ತರಿಗೆ ಬೇರೆ ಬೇರೆ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ಗೌರವಿಸುವ ಪರಂಪರೆ ನಮ್ಮದಾಗಬೇಕು ಮತ್ತು ನಮ್ಮ ಕನ್ಯಾನ ಗ್ರಾಮದ ನಾಟಕ ಕಲಾವಿದರು ಮಾತ್ರವಲ್ಲ ಸಿನಿಮಾ ನಟರಾಗಿ ಹೊರ ಬರಬೇಕು ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೀವ ಬನಾರಿ ಮಾಜಿ ಅಧ್ಯಕ್ಷರು ಶ್ರೀ ವಿಷ್ಣು ಮೂರ್ತಿ ವಯನಟ್ ಕುಲವನ್ ಕ್ಷೇತ್ರ ಕುಟ್ಟಿತ್ತಡ್ಕ, ಮುಖ್ಯ ಅತಿಥಿಗಳು ಶ್ರೀ ಜಗನ್ನಾಥ್ ಶೆಟ್ಟಿ ಅರ್ಪಿಣಿ ಗುತ್ತು ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಮಲಾರಾಯ ದೇವಸ್ಥಾನ ಕನ್ಯಾನ, ಶ್ರೀ ರಾಜಶೇಖರ್ ಶೆಟ್ಟಿ ಕುಡ್ತಮುಗೇರು ನಗರ ಸದಸ್ಯರು ತುಳು ನಾಟಕ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ, ಶ್ರೀಮತಿ ರೇಖಾ ರಮೇಶ್ ಪಂಜಾಜೆ ಅಧ್ಯಕ್ಷರು ಶ್ರೀ ವಿಷ್ಣುಮೂರ್ತಿ ವಯಾನಟ್ ಮಹಿಳಾ ಸಂಘ ಕುಟ್ಟಿತ್ತಡ್ಕ, ಶ್ರೀಮತಿ ಗೀತಾ ಹರೀಶ್ ಶಿಕ್ಷಕರು ದ.ಕ ಜಿಲ್ಲಾ ಪಂಚಾಯತ್ ಹಿರಿಯ ಶಾಲೆ ಪರಪ್ಪು ಇರಾ, ಶ್ರೀ ನವೀನ್ ಕೊಟ್ಯಾನ್ ಅಧ್ಯಕ್ಷರು ಶ್ರೀ ಪುರುಷೋತ್ತಮ ಕೊಡಿಕ್ಕಲ್ ವೇದಿಕೆ ಕನ್ಯಾನ, ಶ್ರೀ ರಾಧಾಕೃಷ್ಣ ಕನ್ಯಾನ ಸಂಚಾಲಕರು ಉಡಲ್ ಕಲಾವಿದರು ಕನ್ಯಾನ, ಶ್ರೀ ಗಂಗಾಧರ ನಾಯಕ್ ಕನ್ಯಾನ ಪ್ರಧಾನ ಕಾರ್ಯದರ್ಶಿ ಶ್ರೀ ಮಲರಾಯ ದೈವಸ್ಥಾನ ಕನ್ಯಾನ, ಶ್ರೀ ಆನಂದ ಬೆಳ್ಚಾಡ ಗೌರವಾಧ್ಯಕ್ಷರು ನಂದಾದೀಪ ಪ್ರಕಾಶನ ಕುಟ್ಟಿತ್ತಡ್ಕ ಕನ್ಯಾನ ಉಪಸ್ಥಿತರಿದ್ದರು.

ಸನ್ಮಾನಿತರು ಶ್ರೀ ಬಾಬು ಪೂಜಾರಿ. (ದೈವಾರಾಧಕರು ಶ್ರೀ ಮಲರಾಯ ದೈವಸ್ಥಾನ ಕನ್ಯಾನ) ಶ್ರೀ ಆನಂದ ಬೆಲ್ಚಾಡ ಬನಾರಿ, (ರಂಗಭೂಮಿ ಭಜನಾ ಕ್ಷೇತ್ರ). ಶ್ರೀ ರಾಜೀವ ಶೆಟ್ಟಿ ಆನೆಯಲಗುತ್ತು(ತುಳು ರಂಗಭೂಮಿ) ಶ್ರೀ ಸಂಜೀವ ಬೆಳ್ಚಾಡ.(ಭಜನಾ ಕ್ಷೇತ್ರ). ಶ್ರೀಮತಿ ಹರಿಣಾಕ್ಷಿ ಪ್ರಕಾಶ್ ಪಕಳ ಕುರಿಯಗುತ್ತು,(ಯಕ್ಷಗಾನ. ರಂಗಭೂಮಿ. ಭಜನೆ ) ಇವರಿಗೆ ಸನ್ಮಾನ ಬಿರುದು ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಸದಾಶಿವ ಅಳಿಕೆ ನಿರೂಪಿಸಿ, ಶಶಿಧರ ಬಂಡಿತ್ತಡ್ಕ ಧನ್ಯವಾದ ನೀಡಿದರು.

About The Author

Leave a Reply