April 7, 2026
WhatsApp Image 2026-04-07 at 1.27.31 PM

 ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬೀಳಲಿದೆ ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಏಪ್ರಿಲ್ 9ರಂದು , ಫಲಿತಾಂಶ ಹೊರ ಬೀಳಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಫಲಿತಾಂಶ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫಲಿತಾಂಶ ಪ್ರಕಟಣೆಯ ಕುರಿತು ಇಲಾಖೆಯು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈಗಾಗಲೇ ಪತ್ರ ಬರೆದಿದೆ. ಸಚಿವರ ಲಭ್ಯತೆಯನ್ನು ಆಧರಿಸಿ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.ತಾಂತ್ರಿಕ ಕೆಲಸಗಳು ಹಾಗೂ ಅಂಕಗಳ ಕ್ರೋಡೀಕರಣ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ 9 ರಂದು ರಿಸಲ್ಟ್ ನೀಡಲು ಇಲಾಖೆ ಉತ್ಸುಕವಾಗಿದೆ.

ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ ಗೊಂದಲಗಳು ವಿದ್ಯಾರ್ಥಿಗಳಿಗೆ ಇರಬಹುದು. ಅದಕ್ಕೆ ಭಯಬೇಡ, ಇಲ್ಲಿ ನೀಡಿರುವ ಲಿಂಕ್​​​ಗಳನ್ನು ಓಪನ್​ ಮಾಡಿ ನೋಡಿದ್ರೆ ಸಾಕು. karresults.nic.in ಮತ್ತು kseab.karnataka.gov.in ಅನ್ನು ಶಿಕ್ಷಣ ಇಲಾಖೆ ನೀಡಿದೆ. ಒಂದು ವೇಳೆ ಈ ಲಿಂಕ್​​ಗಳಲ್ಲಿ ದೋಷ ಬಂದರೆ, ಇನ್ನು ಆಯ್ಕೆಯನ್ನು ಕೂಡ ನೀಡಲಾಗಿದೆ. PUC ಫಲಿತಾಂಶಗಳನ್ನು ಡಿಜಿಲಾಕರ್ ವೆಬ್‌ಸೈಟ್ – digilocker.gov.in ನಲ್ಲಿಯೂ ಪರಿಶೀಲಿಸಲು ಅವಕಾಶವನ್ನು ನೀಡಲಾಗಿದೆ.

About The Author

Leave a Reply