April 8, 2026
l2

ಮಂಗಳೂರು : ತೊಕ್ಕೊಟ್ಟಿ‌ನಲ್ಲಿ ರೌಡಿಶೀಟರ್ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಸಿಬಿ ಪೊಲೀಸರು ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆಂದು ಮಾಹಿತಿ ದೊರೆತಿದೆ.

ಬಂಧಿತ ಆರೋಪಿಗಳು ಉಳ್ಳಾಲದ ರಫತ್ ಆಲಿ, ಮೂಡುಶೆಡ್ಡೆಯ ರಿಜ್ವಾನ್, ಫೈಸಲ್ ನಗರದ ಜುಟ್ಟು ಅಶ್ಫಕ್, ಕಲ್ಲಡ್ಕದ ಖಲೀಲ್, ಬಜಾಲ್ ನ ಶಾಕೀರ್ ಹಾಗೂ ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್  ಎಂದು ತಿಳಿದುಬಂದಿದೆ.

ಆರೋಪಿಗಳನ್ನು ನಿಗೂಢ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿದ್ದು ಒಟ್ಟು ಆರು ಮಂದಿ ಹಂತಕರು ಕೊಲೆಯಲ್ಲಿ ನೇರ ಪಾಲ್ಗೊಂಡ ಮಾಹಿತಿ ದೊರೆತಿದೆ. ಪೋಲಿಸರು ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರನ್ನು ವಿಟ್ಲದ ಬುಡೋಳಿ ಎಂಬಲ್ಲಿ ವಶಕ್ಕೆ ಪಡೆದಿದ್ದು ಆರೋಪಿಗಳು ಮೈಸೂರು, ಬೆಂಗಳೂರು ಕಡೆಗೆ ಪರಾರಿಯಾಗಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.

About The Author

Leave a Reply