

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಮಂಗಳೂರಿನ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಕೆ.ಎನ್ ನೀಡಿದ ಸೋರ್ಸ್ ವರದಿ ಆಧರಿಸಿ ಏಪ್ರಿಲ್ ೬ ರಂದು ಮಂಗೂರು ಲೋಕಾಯುಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಲೋಕಾಯುಕ್ತ ಎಸ್ಪಿಬಿ.ಪಿ ದಿನೇಶ್ ಕುಮಾರ್ ಮಾರ್ಗದರ್ಶದಲ್ಲಿ ಡಿವೈಎಸ್ಪಿಗಳಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಮತ್ತು ತಂಡದ ೬ ಅಧಿಕಾರಿಗಳು ಮಂಗಳೂರು, ಬೆಂಗಳೂರು ಹಾಗೂ ಬಾಗೇಪಲ್ಲಿಯ ಒಟ್ಟು ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.ದಾಳಿಯ ವೇಳೆ ಅಂದಾಜು ರೂ.3, 37,04,000 ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ಬೆಂಗೂರಿನ ನಿವಾಸವೊಂದರಲ್ಲೇ ರೂ. ೨೩.೬೪ ಲಕ್ಷ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮನೆ ಮತ್ತು ವಾಣಿಜ್ಯ ಮಳಿಗೆಗಳು ಬೆಂಗೂರಿನ ಫ್ಲಾಟ್ ಗಳು ಮತ್ತು ಮಂಗಳೂರಿನ ಕಛೇರಿ ಹಾಗೂ ನಿವಾಸದ ಮೇಲೆ ತಪಾಸಣೆ ನಡೆಸಲಾಗಿದೆ. ಸದ್ಯ ಅಧಿಕಾರಿ ಬಾಬು ಬಿ ಎನ್ ಅವರ ವಿರುದ್ಧ ತನಿಖೆ ಮುಂದುವರಿದೆ.







