

ಕಳೆದ ಚುನಾವಣೆಯಲ್ಲಿ ಜಯ ಸಾಧಿಸಿ, ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೇರಳದಲ್ಲಷ್ಟೇ ಅಲ್ಲ, ಕನ್ನಡಿಗರ ಹೃದಯವನ್ನೂ ಗೆದ್ದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಜನಪರ ನಾಯಕನಾಗಿ ಹೊರಹೊಮ್ಮಿದ್ದಾರೆ.
ಇತ್ತಿಚೆಗೆ ಕುಂಬಳೆ- ಆರೀಕಾಡಿ ಪ್ರದೇಶದಲ್ಲಿ ನಿರ್ಮಿಸಲಾದ ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸಿ, ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಂತು ಜನತೆಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಹಲವಾರು ಜನಪರ ಹೋರಾಟಗಳ ಮೂಲಕ ತಮ್ಮ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸಿದ್ದಾರೆ.

ಜನರ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಆಲಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಅವರು, ದಿನದ 24 ಗಂಟೆಯೂ ಜನಸೇವೆಗೆ ಸಿದ್ಧರಾಗಿರುವ ನಾಯಕರು. ಯಾವುದೇ ಜಾತಿ–ಮತ ಭೇದವಿಲ್ಲದೆ, ಸಾಮಾನ್ಯ ವ್ಯಕ್ತಿಯಾಗಿ ಜನರ ನಡುವೆ ಬೆರೆತು ಉತ್ತಮ ಜನಸೇವಕರಾಗಿ ಗುರುತಿಸಿಕೊಂಡಿದ್ದಾರೆ.
ಮಂಜೇಶ್ವರಕ್ಕೆ ಹೊರಗಿನಿಂದ ಬಂದ ವರ್ಗೀಯ ನಾಯಕರ ಅಗತ್ಯವಿಲ್ಲ; ಜಾತಿ–ಮತಗಳ ನಡುವೆ ಸೇತುವೆ ನಿರ್ಮಿಸುವ ಮನಸ್ಸುಳ್ಳ ನಾಯಕ ಬೇಕು ಎಂಬ ಜನರ ಅಭಿಪ್ರಾಯ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಶ್ರಫ್ ಅವರ ಪರ ಜನರ ಒಲವು ಹೆಚ್ಚಾಗಿದೆ ಎಂಬುದು ಚುನಾವಣಾ ಪ್ರಚಾರದ ವೇಳೆ ಗೋಚರಿಸುತ್ತಿದೆ.
ಇಂತಹ ಜನಪರ ನಾಯಕತ್ವ ಮತ್ತೆ ಗೆದ್ದು ಬರಲಿದೆ ಎಂಬ ವಿಶ್ವಾಸ ಜನರಲ್ಲಿ ಇದೆ. ಅವರು ಇನ್ನಷ್ಟು ಜನರಿಗೆ ಹತ್ತಿರವಾಗಿ ಸೇವೆ ಸಲ್ಲಿಸಲಿ ಎಂಬುದು ಎಲ್ಲರ ಆಶಯ






