April 10, 2026
WhatsApp Image 2026-04-10 at 10.53.41 AM

ಬೆಳ್ತಂಗಡಿ: ತಾನು ಕೆಲಸ ಮಾಡುತ್ತಿದ್ದ ಕೇರಳದ ಹೋಟೆಲ್‌ನ ಮಾಲಕನನ್ನೇ ಏ.6ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಪೆರ್ದಾಡಿ ನಿವಾಸಿ ಉಮರಬ್ಬ ಎಂಬವರ ಪುತ್ರ ಇರ್ಷಾದ್ (32) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಡಯಮಂಗಳ- ಕುರಿಯೋಡು ಸ್ವೈಸಿ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲೀಕ ಶಕೀ‌ರ್ ಹುಸೈನ್ ಎಂಬವರನ್ನು ಇರ್ಷಾದ್ ಕೊಲೆ ಮಾಡಿದ್ದಾನೆ.

ಬಿರಿಯಾಣಿ ಪಾಕ ತಜ್ಞನಾಗಿದ್ದ ಬೆಳ್ತಂಗಡಿಯ ಇರ್ಷಾದ್ ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ಬರುತ್ತಿದ್ದ ಅಕ್ಕಿ ಮೂಟೆಯಲ್ಲಿರುವ 50,100,150 ರೂಪಾಯಿಗಳ ಕೂಪನ್‌ಗಾಗಿ ನಡೆದ ಜಗಳದಿಂದ ಈ ಕೃತ್ಯವೆಸಗಿದ್ದಾನೆ. ಅಕ್ಕಿಮೂಟೆಯಲ್ಲಿ ಬರುತ್ತಿದ್ದ ಕೂಪನ್ ಒಟ್ಟು ಸೇರಿಸಿ ಮಾಲಕರಿಗೆ ಕೊಡಬೇಕೆಂದು ಹೊಟೇಲ್ ಮಾಲಕ ಕೇರಳದ ಆಕಲ್ ನಿವಾಸಿ ಶಕೀರ್ ಹುಸೈನ್ ನಿರ್ದೇಶನ ನೀಡಿದ್ದರು. ಅದಾಗ್ಯೂ ಇರ್ಷಾದ್ ಕೂಪನ್‌ಗಳನ್ನು ತಾನೇ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನುಪ್ರಶ್ನಿಸುವ ಸಲುವಾಗಿ ಪತ್ನಿಯೊಂದಿಗೆ ಆತ ವಿಶ್ರಾಂತಿ ಪಡೆಯುತ್ತಿದ್ದ ವಸತಿ ಗೃಹದ ಎರಡನೇ ಮಹಡಿಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇರ್ಷಾದ್ ಚಾಕು ತೆಗೆದು ಮಾಲಕನ ಎದೆಗೆ ಬಲವಾಗಿ ಚುಚ್ಚಿದ್ದಾನೆ ಎನ್ನಲಾಗಿದೆ.

ಕೇರಳ ಹೊಟೇಲ್ ಮಾಲೀಕ ಶಕೀರ್ ಹುಸೈನ್ ಅವರನ್ನು ಏ.6ರಂದು ಕೊಲೆ ಮಾಡಿದ ತಕ್ಷಣ ಬಟ್ಟೆ ಬದಲಿಸಿ ಅದೇ ಹೊಟೇಲ್‌ನ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗುವಾಗ ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಹಾಗೂ ಊರವರ ಸಹಕಾರದೊಂದಿದೆ ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿ ಪ್ರಯಾಣಿಸುತ್ತಿದ್ದಾಗ ಇರ್ಷಾದ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕೊಲ್ಲಂ ಜೈಲಿಗೆ ಕಳುಹಿಸಲಾಗಿದೆ.

About The Author

Leave a Reply