April 12, 2026
WhatsApp Image 2026-04-12 at 11.40.54 AM

ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಹರ ಪೋಲಿಸ್ ಠಾಣೆಯಲ್ಲಿ ಸುವೊಮೊಟೊ ಅಡಿ ಪ್ರಕರಣ ದಾಖಲಿಸಲಾಗಿದೆ.

ಏ.7 ರಂದು ನಗರದ ಸುಭಾಷ್‌ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲೆಬೆಲೆ, “ಮುಸಲ್ಮಾನ್‌ ಹುಡುಗಿಯರಿದ್ದಾರಲ್ಲಾ ಗಂಡಸರಿಗಿಂತ ಡೇಂಜರ್.

ನಮ್ಮ ಹೆಣ್ಣು ಮಕ್ಕಳಿಗೆ ಮನೆಗೆ ಹೋಗಿ ಹೇಳಿಕೊಡಿ. ಅಕಸ್ಮಾತ್‌ ಮುಸ್ಲಿಂ ಹುಡುಗನ್ನು ಫ್ರೆಂಡ್‌ ಶಿಪ್ ಮಾಡಿದರೆ ಒಕೆ, ಮುಸ್ಲಿಂ ಹೆಣ್ಣು ಮಕ್ಕಳನ್ನು ಫ್ರೆಂಡ್‌ ಶಿಪ್ ಮಾಡಲೇಬೇಡಿ ಬಹಳ ಡೆಂಜರ್” ಎಂದು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ದ್ವೇಷ ಭಾವನೆ ಬರುವಂತೆ ಪ್ರಚೋದನಕಾರಿಯಾಗಿ ಭಾಷಣ ಮಾಡಿರುತ್ತಾರೆ.

ಈ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್‌ ಸಿಬ್ಬಂದಿ ತುಕಾರಾಂ ನೀಡಿದ ದೂರಿನ ಮೇರೆಗೆ ಸುಮೊಟೊ ಕೇಸ್ ದಾಖಲಿಸಲಾಗಿದೆ ಎಂದು‌ ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಇನ್ನು ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಗಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲು ಕಾನೂನು ಸಲಹೆ ಪಡೆದುಕೊಳ್ಳಲು ಸೂಚಿಸಲಾಗಿದೆ. ಹೀಗಾಗಿ ಈ ಪ್ರಕರಣ ದಾಖಲಿಸಲು ಪರಿಶೀಲನೆಯಲ್ಲಿ ಇಡಲಾಗಿದೆ.

About The Author

Leave a Reply