April 13, 2026
WhatsApp Image 2026-04-13 at 1.19.43 PM

ವಿಟ್ಲ: ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರಕಳ್ಳತನ ಮಾಡಿರುವ ಘಟನೆ  ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ.

ಕೋಡಪದವು ಮದಕ ನಿವಾಸಿಯೊಬ್ಬರ ಮಗು ಎಂದಿನಂತೆ ತನ್ನ ಮನೆಯ ಪರಿಸರದಲ್ಲಿ ಆಟವಾಡುತ್ತಿತ್ತು. ಈ ವೇಳೆ ಬೈಕ್‌ನಲ್ಲಿ ಬಂದ ಕಳ್ಳ  ಕ್ಷಣಾರ್ಧದಲ್ಲಿ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಳ್ಳತನ  ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಆರೋಪಿಯು ಬೈಕ್‌ನಲ್ಲಿ ವೇಗವಾಗಿ ಬರುವುದು ಮತ್ತು ಕೃತ್ಯ ಎಸಗಿ ಪರಾರಿಯಾಗುವ ದೃಶ್ಯಗಳು ಸೆರೆಯಾಗಿದೆ.

About The Author

Leave a Reply