May 18, 2026
image - 2026-05-18T105305.175

ಪಡುಬಿದ್ರಿ: ಬಸ್ ನಿಲ್ದಾಣದಲ್ಲಿ ದೊರೆತ ಸಾವಿರಾರು ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್‌ ಅನ್ನು ರಿಕ್ಷಾ ಚಾಲಕರೊಬ್ಬರು ವಾರೀಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಬಸ್ ನಿಲ್ದಾಣದ ಬಳಿ 50,000ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ರಿಕ್ಷಾ ಚಾಲಕ ಜಗದೀಶ ಅವರಿಗೆ ದೊರೆತಿದ್ದು, ಅವರು ಮತ್ತು ಆಶಾಲತಾ ಎಂಬವರು ಅದನ್ನು ಪಡುಬಿದ್ರಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು.ಬಳಿಕ ಪೊಲೀಸರು ಬ್ಯಾಗಿನ ಮಾಲಕಿ ಫಾತಿಮಾ ಮಂಗಳೂರು ಅವರನ್ನು ಪತ್ತೆ ಹಚ್ಚಿ, ಅವರಿಗೆ ಬ್ಯಾಗ್‌ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರೆ ಠಾಣಾಧಿಕಾರಿ ಸಕ್ತಿವೇಲು ಹಾಜರಿದ್ದರು.

About The Author

Leave a Reply