May 22, 2026
WhatsApp Image 2026-05-22 at 2.08.25 PM

 ಸದ್ಯ ಭಾರತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೆನ್ Z ಯುವಕರನ್ನು ಆಕರ್ಷಿಸುತ್ತಿದೆ. ಆದರೆ, ಈ ಪಕ್ಷಕ್ಕೆ ಸೇರಲು ಕಳುಹಿಸಲಾಗುವ ವಾಟ್ಸ್​ಆ್ಯಪ್​ ಲಿಂಕ್‌ಗಳ ಮೂಲಕ ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದೆ.

ಹೌದು ಜನರನ್ನು ಮರುಳು ಮಾಡಲು, ಅವರ ಬ್ಯಾಂಕ್​ ಖಾತೆಯನ್ನು ಲೂಟಿ ಮಾಡಲು ಹೊಸ ಹೊಸ ಪ್ರಯೋಗ ಮಾಡುತ್ತಲೇ ಬಂದಿದೆ. ಸೋ ಕಾಲ್ಡ್​ ವೆಲ್​ ಎಜುಕೇಟೆಡ್​ ಅರ್ಥಾತ್​ ಸುಶಿಕ್ಷಿತರು ಎನ್ನಿಸಿಕೊಂಡಿರುವ ಜನರೇ ಇವರ ಮೋಸಕ್ಕೆ ಬಲಿಯಾಗಿ ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು, ಮಾಧ್ಯಮಗಳಲ್ಲಿ ಎಷ್ಟೇ ಎಚ್ಚರಿಕೆ ಬಂದರೂ, ತಮಗೆ ಆಮಿಷ ತೋರಿ ಬಂದಿರುವ ಲಿಂಕ್​ ನೋಡಿದ ತಕ್ಷಣ ಎಲ್ಲಾ ಎಚ್ಚರಿಕೆಯೂ ಮರೆತು ಹೋಗಿ ಲಿಂಕ್​ ಕ್ಲಿಕ್​ ಮಾಡಿ ದುಡ್ಡು ಕಳೆದುಕೊಂಡಿರುವವರೇ ಲಕ್ಷ ಲಕ್ಷ ಮಂದಿ ಇದ್ದಾರೆ. ಹೀಗೆ ಕಳೆದುಕೊಂಡ ದುಡ್ಡು ಸಿಗುವುದು ಕೂಡ ಅತ್ಯಂತ ವಿರಳ. ಏಕೆಂದರೆ ಸೈಬರ್​ ಕ್ರಿಮಿನಲ್ಸ್​ ನೆಟ್​ವರ್ಕ್​ ಅಷ್ಟೊಂದು ಸ್ಟ್ರಾಂಗ್​ ಆಗಿದೆ.

ಕಾಕ್ರೋಚ್​ ಜನತಾ ಪಕ್ಷಕ್ಕೆ ನೀವೂ ಜಾಯಿನ್​ ಆಗಿ ಎಂದು ನಿಮ್ಮ ವಾಟ್ಸ್​ಆ್ಯಪ್​ಗೆ ಲಿಂಕ್​ ಬರುತ್ತದೆ. ಸೋಷಿಯಲ್​ ಮೀಡಿಯಾದಲ್ಲಿ ಇದರ ಹವಾ ನೋಡಿ ನೀವೂ ಭಾರತವನ್ನು ಬದಲಾಯಿಸಿಯೇ ಬಿಡೋಣ, ನಾನೂ ಈ ಪಕ್ಷವನ್ನು ಜಾಯಿನ್ ಆಗೋಣ ಎಂದು ಹಿಂದೆ ಮುಂದೆ ನೋಡದೇ ಲಿಂಕ್​ ಕ್ಲಿಕ್​ ಮಾಡಿದರೆ ನಿಮಗೆ ಅರಿವೇ ಇಲ್ಲದೇ, ನಿಮ್ಮ ಅಕೌಂಟ್​ ಹ್ಯಾಕ್​ ಆಗಿರುತ್ತದೆ. ಬ್ಯಾಂಕ್​ ಲೂಟಿಯಾಗಿರುತ್ತದೆ. ಇದಾಗಲೇ ಕೆಲವು ಕೇಸ್​​ಗಳು ಹೀಗೆಯೇ ಆಗಿದ್ದು, ತಮ್ಮ ಬ್ಯಾಂಕ್​ನಲ್ಲಿ ಏನಾಗ್ತಿದೆ ಎನ್ನುವುದೇ ತಿಳಿಯದೇ ಜೆನ್​ ಜೀಗಳು ಕಂಗಾಲಾಗಿರುವುದಾಗಿ ಈ ಪೊಲೀಸ್​ ಅಧಿಕಾರಿ ಎಚ್ಚರಿಸಿದ್ದಾರೆ ನೋಡಿ.

About The Author

Leave a Reply