June 5, 2026
WhatsApp-Image-2026-06-05-at-2.46.22-PM

ಪುತ್ತೂರು: ಸೋಶಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸದಸ್ಯರು, ಹಿರಿಯ ಉದ್ಯಮಿ ಹಾಗೂ ಪ್ರಮುಖ ಸಾಮಾಜಿಕ, ಧಾರ್ಮಿಕ ಮುಖಂಡರಾಗಿದ್ದ ಪುತ್ತೂರಿನ ಹಾಜಿ ಇಬ್ರಾಹಿಂ ಸಾಗರ್ (62) ರವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್‌ಗೆ ಒಳಗಾಗಿದ್ದರು. ಇದರೊಂದಿಗೆ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಯೂ ಉಲ್ಬಣಿಸಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಪಕ್ಷ ಸಂಘಟನೆಯ ಧ್ರುವತಾರೆ:

SDPI ಪಕ್ಷದ ಆರಂಭದ ಕಾಲಘಟ್ಟದಿಂದಲೂ ಮುಂಚೂಣಿಯಲ್ಲಿದ್ದ ಇಬ್ರಾಹಿಂ ಸಾಗರ್ ಅವರು ಪುತ್ತೂರು ಭಾಗದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. SDPI ಪುತ್ತೂರು ವಿಧಾನಸಭಾ ಸಮಿತಿಯ ಉಪಾಧ್ಯಕ್ಷರಾಗಿ,ನಂತರ ಅಧ್ಯಕ್ಷರಾಗಿ ಹಾಗೂ ಪ್ರಸಕ್ತ ಜಿಲ್ಲಾ ಸಮಿತಿ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದುದು. ಪಕ್ಷವು ಸಂಕಷ್ಟದ ಸಮಯದಲ್ಲಿದ್ದಾಗಲೂ ಅವರು ನೀಡಿದ ಧೀಮಂತ ನಾಯಕತ್ವ ಮತ್ತು ಕಾರ್ಯಚಟುವಟಿಕೆಗಳು ಅತ್ಯಂತ ಪ್ರಶಂಸನೀಯವಾಗಿದ್ದವು.ಬಹುಮುಖ ವ್ಯಕ್ತಿತ್ವದ ಧುರೀಣ:ಒಬ್ಬ ಯಶಸ್ವಿ ಉದ್ಯಮಿಯಾಗಿದ್ದ ಹಾಜಿ ಇಬ್ರಾಹಿಂ ಸಾಗರ್ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಪುತ್ತೂರಿನ ಬಡಕ್ಕೋಡಿ ಮಸೀದಿ ಕಮಿಟಿಯ ಅಧ್ಯಕ್ಷರಾಗಿ, ಮುಸ್ಲಿಂ ಯುವಜನ ಪರಿಷತ್‌ನ ನೇತೃತ್ವವನ್ನು ವಹಿಸಿದ್ದ ಅವರು, ಪುತ್ತೂರು ತಾಲೂಕು ಜಂಯಿತುಲ್ ಫಲಾಹ್‌ನ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಕೇವಲ ಸಂಘಟನೆಯಷ್ಟೇ ಅಲ್ಲದೆ, ಅವರು ಒಬ್ಬ ಉತ್ತಮ ಹಾಡುಗಾರರೂ ಆಗಿದ್ದರು.

About The Author

Leave a Reply