June 23, 2026
WhatsApp Image 2026-06-23 at 1.23.39 PM

ಬಂಟ್ವಾಳ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಬಂಟ್ವಾಳ ಮೂಲದ ಮುಸ್ತಫಾ ಎಂಬ ವ್ಯಕ್ತಿ ಕಳೆದ 18 ವರ್ಷಗಳಿಂದ ನಾಪತ್ತೆಯಾಗಿದ್ದು, ಅವರ ಕುಟುಂಬ ಇನ್ನೂ ಯಾವುದೇ ಸುಳಿವಿಲ್ಲದೆ ಕಾದು ಕುಳಿತಿದೆ.

ಲಭ್ಯ ಮಾಹಿತಿಯ ಪ್ರಕಾರ, ಮುಸ್ತಫಾ ಅವರು 2003ರಲ್ಲಿ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಅಲ್ಲಿ ಕೆಲಸ ನಿರ್ವಹಿಸಿದ ಅವರು, ಬಳಿಕ ಉದ್ಯೋಗ ಸಂಬಂಧಿತ ಸಮಸ್ಯೆಗಳ ಕಾರಣದಿಂದ ತಮ್ಮ ತಂದೆಗೆ ದೂರವಾಣಿ ಕರೆ ಮಾಡಿ, “ನಾನು ಊರಿಗೆ ಹಿಂತಿರುಗುತ್ತಿದ್ದೇನೆ. ಈಗ ವಿಮಾನ ನಿಲ್ದಾಣದಲ್ಲಿದ್ದೇನೆ” ಎಂದು ತಿಳಿಸಿದ್ದರು.

ಆ ಕರೆ ಬಳಿಕ ಮುಸ್ತಫಾ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. 2009ರಿಂದ ಇಂದಿನವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಿಲ್ಲ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ, ಕರ್ನಾಟಕ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ದೂರು ಮತ್ತು ಮಾಹಿತಿ ನೀಡಲಾಗಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಕುಟುಂಬದವರು ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರು, ಭಾರತೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಗೆ ಮನವಿ ಮಾಡಿದ್ದು, ಮುಸ್ತಫಾ ಅವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಯವಿಟ್ಟು ತಿಳಿಸುವಂತೆ ಕೋರಿದ್ದಾರೆ.

ಸುಮಾರು 18 ವರ್ಷಗಳಿಂದ ತಮ್ಮ ಮಗನಿಗಾಗಿ ಕಾಯುತ್ತಿರುವ ಕುಟುಂಬಕ್ಕೆ ಅವರನ್ನು ಮತ್ತೆ ಸೇರಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಕುಟುಂಬದವರು ವಿನಂತಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :

+919606684193

+919945197269

About The Author

Leave a Reply