August 24, 2026
ut-khader-97684748

ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ ಮೀಲಾದುನ್ನೆಬಿ ಆಚರಿಸಲಾಗು ತ್ತಿದೆ. ಹಾಗಾಗಿ ಸರಕಾರಿ ಸಾರ್ವತ್ರಿಕ ರಜೆಯನ್ನು ಆ.25ರಂದು ನೀಡಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ಜ್ ಮತ್ತು ವಕ್ಫ್ ಹಾಗೂ ದ.ಕ. ಉಸ್ತುವಾರಿ ಸಚಿವ ಯು.ಟಿ.ಖಾದರ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈಗಾಗಲೆ ರಾಜ್ಯ ಸರಕಾರವು ಮೀಲಾದುನ್ನೆಬಿ ಸಾರ್ವತ್ರಿಕ ರಜೆಯನ್ನು ಆ.26ರಂದು ನಿಗದಿಪಡಿಸಿತ್ತು. ಆದರೆ ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರದರ್ಶನದಲ್ಲಿ ವ್ಯತ್ಯಾಸವಾದ ಕಾರಣ ಪ್ರವಾದಿ ಮುಹಮ್ಮದ್ (ಸ)ರ ಜನ್ಮದಿನವನ್ನು ಆ.25ರಂದು ಆಚರಿಸಲು ಉಭಯ ಜಿಲ್ಲೆಯ ಖಾಝಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಹಲವು ಮುಸ್ಲಿಂ ಸಂಘಟನೆಗಳ ಮುಖಂಡರು ಆ.26ರ ಸಾರ್ವತ್ರಿಕ ರಜಾ ದಿನವನ್ನು ಬದಲಾಯಿಸಿ ಆ.25ರಂದು ನೀಡಲು ಸಚಿವ ಖಾದರ್‌ಗೆ ಮನವಿ ಮಾಡಿದ್ದರು. ಅದರಂತೆ ಸಚಿವ ಖಾದರ್ ಆ.25ರಂದು ರಜೆ ಘೋಷಿಸುವಂತೆ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

About The Author

Leave a Reply