October 1, 2026
WhatsApp Image 2026-10-01 at 5.02.54 PM

ಮಂಗಳೂರು: ಎಂಆರ್‌ಪಿಎಲ್‌ನ ಸಿಎಚ್‌ಟಿ (CHT) ಘಟಕದಲ್ಲಿ ಸೆ.30ರಂದು ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಪರಿಹಾರ ನೀಡುವುದಾಗಿ ಎಂಆರ್‌ಪಿಎಲ್‌ ಆಡಳಿತ ಮಂಡಳಿ ಭರವಸೆ ನೀಡಿದೆ.

ಈ ಕುರಿತು ಅಕ್ಟೋಬರ್‌ 1ರಂದು ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಶ್ಯಾಮ್‌ಪ್ರಸಾದ್ ಕಾಮತ್ ಅವರ ಸಹಿಯಿರುವ ಪತ್ರವನ್ನು ಕಾರ್ಮಿಕ ಸಂಘಟನೆಗೆ ನೀಡಲಾಗಿದೆ. ಪತ್ರದಲ್ಲಿ ಮನೀಶ್ ಕರ್ಕೇರ ಅವರ ಸಾವಿಗೆ ಸಂಸ್ಥೆಯ ಆಡಳಿತ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಎಂಆರ್‌ಪಿಎಲ್‌ ವತಿಯಿಂದ ₹90 ಲಕ್ಷ ಪರಿಹಾರ ನೀಡುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ GTLI ಅಡಿಯಲ್ಲಿ ₹10 ಲಕ್ಷ ಹಾಗೂ WCP ಅಡಿಯಲ್ಲಿ ₹20 ಲಕ್ಷ ದೊರೆಯಲಿದ್ದು, ಈ ಮೂಲಕ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಪರಿಹಾರಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಸೆ.30ರಂದು ಎಂಆರ್‌ಪಿಎಲ್‌ನ ಸಿಎಚ್‌ಟಿ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮನೀಶ್ ಕರ್ಕೇರ ಮೃತಪಟ್ಟಿದ್ದರು. ಘಟನೆಯ ಬಳಿಕ ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಚಿಕಿತ್ಸೆ ಹಾಗೂ ಕಾರ್ಮಿಕರ ಸುರಕ್ಷತೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

About The Author

Leave a Reply