

ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಸುದರ್ಶನ ರಟಕಲ್ ಕೊಲೆಯಾದ ಯುವಕ. ಬಂಧಿತರನ್ನು ಭಾಗ್ಯವಾನ್, ವಿಶಲ್, ಸಚಿನ್, ಸಾಯಿ ಕಾಂಬ್ಲೆ ಹಾಗೂ ಆದಿತ್ಯ ಕಾಂಬ್ಲೆ ಎಂದು ಗುರುತಿಸಲಾಗಿದೆ.
ಭಾಲ್ಕಿ ಪಟ್ಟಣದ ಮಾಸುಮಪಾಶಾ

ಕಾಲೋನಿಯಲ್ಲಿ ಯುವಕನನ್ನು ಐವರು ಆರೋಪಿಗಳು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ. ಬಳಿಕ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳು, ಮೃತದೇಹವನ್ನು ಕಡ್ಯಾಳ ಗ್ರಾಮದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ತಂದು ಎಸೆದು ಪರಾರಿಯಾಗಿದ್ದರು






