

ಮಂಗಳೂರು: ಕೆಲಸಕ್ಕೆಂದು ಹೋದ ಮಹಿಳೆಯೊಬ್ಬರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅರ್ಚನಾ (35) ಕಾಣೆಯಾದ ಮಹಿಳೆ. ಇವರು ಸೆಪ್ಟೆಂಬರ್ 17ರಂದು ಎಂದಿನಂತೆ ಕೆಲಸಕ್ಕೆ ತೆರಳಿದವರು ವಾಪಸ್ ಬಂದಿರಲಿಲ್ಲ. ಈಕೆ ರಾಘವೇಂದ್ರ (42) ಎಂಬವರೊಂದಿಗೆ ತೆರಳಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ






