November 12, 2026
WhatsApp Image 2026-11-12 at 10.41.45 AM

ಪುತ್ತೂರು: ಬಿಂದಿಗೆಯಲ್ಲಿ ಕುಡಿಯುವ ನೀರು ತರುತ್ತಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ನಾಲ್ವರು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲ್ಲೂಕು ಪಡೂರು ಗ್ರಾಮದ ದೆಮೇರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಹಲ್ಲೆಯಿಂದ ಪಡೂರು ಗ್ರಾಮದ ದೆಮೇರು ದಿ|ಶಿವಪ್ಪ ಗೌಡ ಅವರ ಪತ್ನಿ ದಮಯಂತಿ (60ವ) ಎಂಬವರು ಗಾಯಗೊಂಡಿದ್ದಾರೆ. ನಾನು ಸಂಬಂಧಿಕರ ಮನೆಯ ಬಾವಿಯಿಂದ ಬಿಂದಿಗೆಯಲ್ಲಿ ಕುಡಿಯುವ ನೀರು ತರುತ್ತಿದ್ದ ವೇಳೆ ದಾರಿಯಲ್ಲಿ ನಿಂತಿದ್ದ ಸ್ಥಳೀಯರಾದ ವಿಜಯಕುಮಾರಿ, ಸ್ವಪ್ನಗೋಪಿನಾಥ್, ಶಿವಕೇಶವ, ರಂಜನ್ ಅವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಗಾಯಾಳು ದಮಯಂತಿ ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ. ದಾರಿ ವಿವಾದಕ್ಕೆ ಸಂಬಂಧಿಸಿ ಕಳೆದ ಒಂದು ವರ್ಷದಿಂದ ನಾವು ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ದಮಯಂತಿ ಅವರ ಪುತ್ರ ವೆಂಕಟೇಶ್ ತಿಳಿಸಿದ್ದಾರೆ.

About The Author

Leave a Reply