ಮಂಗಳೂರು: “ಆರ್ಡರ್‌ ಗ್ಯಾಂಗ್‌” ನಿಂದ ಭಾರೀ ವಂಚನೆ

ಮಂಗಳೂರು: ನಗರದ ಬಜಪೆ ಸಮೀಪ ಜನರಿಗೆ ಈಗ ಹೊಸ ಹೊಸ ಗ್ಯಾಂಗ್‌ ಪರಿಚಯವಾಗುತ್ತಿರುವುದು ಅಚ್ಚರಿಯಾಗುತ್ತಿದೆ. ಕಳ್ಳತನ, ಮೋಸ-ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.ನಗರದಲ್ಲಿ ಈಗ ಹೊಸ ಗ್ಯಾಂಗ್‌ ಒಂದು ಹುಟ್ಟಿಕೊಂಡಿದೆ. ಅದುವೇ “ಆರ್ಡರ್‌ ಗ್ಯಾಂಗ್‌” ಎಂದು ತಿಳಿದು ಬಂದಿದೆ.
ಈ “ಆರ್ಡರ್‌ ಗ್ಯಾಂಗ್‌’’ ಈ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಕಳ್ಳತನದ “ಚಡ್ಡಿ ಗ್ಯಾಂಗ್‌’’ ನಂತಹ ಗ್ಯಾಂಗ್‌ ಅಲ್ಲ. ಅವರದ್ದು ಮನೆಗಳಲ್ಲಿ ಕಳ್ಳತನ ನಡೆಸುವುದು. ಆದರೆ ಈ “ಆರ್ಡರ್‌ ಗ್ಯಾಂಗ್‌’’ನ ಕಥೆವೇ ಭಿನ್ನವಾದುದು. ಇವರದ್ದು ಅಂಗಡಿಗಳಲ್ಲಿ ಭಾರೀ ಪ್ರಮಾಣದ “ಆರ್ಡರ್‌’ಗಳನ್ನು ನೀಡಿ ಅವರನ್ನೇ ಯಾಮಾರಿಸಿ ಹಣ ದೋಚುವುದು. ಅದರಲ್ಲೂ ಈ ಗ್ಯಾಂಗ್‌ ಬರುವುದು ಹಗಲಿನಲ್ಲೇ, ಅದೂ ಕಾರಿನಲ್ಲಿ! ಈ ಗ್ಯಾಂಗ್‌ಗೆ ಹೆಚ್ಚು ಮೋಸ ಹೋದವರು ಪ್ರಮುಖ ವ್ಯಾಪಾರಿಗಳು ಎಂದು ತಿಳಿಯಲಾಗಿದೆ.

ಬೇರೆ ಜಿಲ್ಲೆಗಳಿಂದ ಬಂದು ಚಡಿ ಹಾಕಿ ಮನೆಗಳ ಕಿಟಿಕಿ, ಬಾಗಿಲುಗಳನ್ನು ತುಂಡರಿಸಿ ಮನೆಯೊಳಗೆ ನುಗ್ಗಿ ಬೆದರಿಸಿ ನಗ-ನಗದು ದೋಚುವ “ಚಡ್ಡಿ ಗ್ಯಾಂಗ್‌’’ ಹೆಸರು ಪ್ರಚಲಿತದಲ್ಲಿ ಇದ್ದಂತೆ ವ್ಯಾಪಾರಿಗಳನ್ನು ದೋಚುವ “ಆರ್ಡರ್‌ ಗ್ಯಾಂಗ್‌’’ಗೆ ಈ ಹೆಸರನ್ನು ಇಟ್ಟವರೇ ವ್ಯಾಪಾರಿಗಳು. ಈ ಗ್ಯಾಂಗ್‌ನಲ್ಲಿ ಸುಮಾರು ನಾಲ್ಕೈದು ಮಂದಿ ಇರುತ್ತಾರೆ. ಕಾರಿನಲ್ಲಿ ಬರುವ ಈ ಗ್ಯಾಂಗ್‌ ಪರಿಸರವನ್ನೊಮ್ಮೆ ಅವಲೋಕನ ಮಾಡಿ ವ್ಯಾಪಾರಿಗಳಿಂದ ಹಣವನ್ನು ದೋಚಲು ಯೋಜನೆ ರೂಪಿಸುತ್ತಾರೆ.

ಕಾರಿನಲ್ಲಿ ಬಂದವರಲ್ಲವೇ ಹಾಗೆಲ್ಲ ವ್ಯಾಪಾರ-ವಹಿವಾಟಿನಲ್ಲಿ ಚಿಲ್ಲರೆ ಮೋಸ ಮಾಡುತ್ತಾರೆಯೇ ಎನ್ನುವ ಆಲೋಚನೆಯೂ ವ್ಯಾಪಾರಿಗಳಿಗೆ ಬಂದಂತಿಲ್ಲ. ಇದರಿಂದಲೇ ಮೋಸ ಹೋಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.

Leave a Reply