April 26, 2026
WhatsApp Image 2024-07-28 at 9.52.52 AM

ಬೆಳ್ತಂಗಡಿ: ಬೊಲೆರೊ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪುತ್ರಿ ಮೃತಪಟ್ಟು, ತಂದೆ ಗಾಯಗೊಂಡ ಘಟನೆ ಮುಂಡಾಜೆಯ ಸೀಟು ಬಳಿ ಶನಿವಾರ ಸಂಜೆ ಸಂಭವಿಸಿದೆ. ಮುಂಡಾಜೆ ಕಲ್ಮಂಜ ನಿವಾಸಿ ಗುರುಪ್ರಸಾದ್‌ ಗೋಖಲೆಯವರ ಪುತ್ರಿ ಉಜಿರೆ ಎಸ್‌ಡಿಎಂ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ (9) ಮೃತಪಟ್ಟ ಬಾಲಕಿ. ಗುರುಪ್ರಸಾದ್‌ ಗೋಖಲೆ ಹಾಗೂ ಅವರ ಪುತ್ರಿ ಅನರ್ಘ್ಯ ಉಜಿರೆಯಿಂದ ಮನೆಕಡೆಗೆ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬಂದ ಬೊಲೆರೊ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಗಾಯಗೊಂಡಿದ್ದ ತಂದೆ-ಪುತ್ರಿಯನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೊ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

About The Author

Leave a Reply