ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿ ಹೈಕೋರ್ಟ್ ವಜಾಗೋಳಿಸಿದ ಬಳಿಕ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದೀಗ ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ತೆರುಗೇಟು ನೀಡಿದ್ದು ನಾನು ಯಾಕೆ ರಾಜೀನಾಮೆ ಕೊಡಲಿ ರಾಜೀನಾಮೆ ನೀಡುವ ಮಾತಿಲ್ಲ ಹಲೋ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದರು.
ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಬೆಂಗಳೂರಿನ ಗ್ರಾಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾಕೆ ಸಮಸ್ತಾನಕ್ಕೆ ರಾಜಿನಾಮೆ ಕೊಡಬೇಕು,? ರಾಜೀನಾಮೆಯ ಮಾತೆ ಬರುವುದಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಜಾಮೀನುನ ಮೇಲೆ ಇಲ್ವಾ? ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ ಬೇಕಾದರೆ ಅವರನ್ನು ಕೇಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಸದ್ಯ ನಾನು ತೀರ್ಪು ಏನಿದೆ ಅಂತ ಓದಿಲ್ಲ. ತೀರ್ಪು ಓದಿದ ಬಳಿಕ ಮತ್ತಷ್ಟು ಈ ಕುರಿತು ಮಾತನಾಡುತ್ತೇನೆ.