Visitors have accessed this post 153 times.
ಮಂಗಳೂರು ವಕೀಲರ ಸಂಘದ ವತಿಯಿಂದ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಮ್ಮ ಸಂಘದ ಸದಸ್ಯರಿಂದ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರನ್ನು ಭೇಟಿಯಾಗಿ ಬೆಂಬಲವನ್ನು ಕೋರಿ ಮನವಿಯನ್ನು ಸಲ್ಲಿಸಲಾಯಿತು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀ ವೇದವ್ಯಾಸ ಕಾಮತ್ ರವರು ಪೂರ್ಣ ಬೆಂಬಲವನ್ನು ಸೂಚಿಸಿದಲ್ಲದೆ.
ಮುಂದಿನ ಅಧಿವೇಶನದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ಬಗ್ಗೆ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು, ಹಾಗೂ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲರ ಸಂಘದ ಮುಂದಿನ ಹೋರಾಟಕ್ಕೆ ಪೂರ್ಣ ಬೆಂಬಲವನ್ನು ಸೂಚಿಸಿದರು. ಮಂಗಳೂರು ವಕೀಲ ಸಂಘದ ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಎಚ್ ವಿ., ಸಂಘದ ಮಾಜಿ ಕೋಶಾಧಿಕಾರಿ ಶ್ರೀ ವಿನಯಕುಮಾರ್, ಮಂಗಳೂರು ವಕೀಲರ ಸಂಘದ ಸದಸ್ಯರಾದ ಶ್ರೀ ಜಗದೀಶ್, ಶ್ರೀ ಜಾಕಿರ್ ಹುಸೈನ್, ಶ್ರೀ ಪ್ರಸಾದ್ ಉಪಸ್ಥಿತರಿದ್ದರು.