Visitors have accessed this post 1788 times.

ಮಂಗಳೂರು: ಕಾಳಿಯ ರಫೀಕ್ ಹತ್ಯೆ ಪ್ರಕರಣ ಖುಲಾಸೆ..!

Visitors have accessed this post 1788 times.

ಮಂಗಳೂರು: ಕಾಲಿಯ ರಫೀಕ್ ಕೊಲೆ ಆರೋಪ ಎಲ್ಲಾ ಆರೋಪಿಗಳನ್ನು ನಿರಾಪರಾಧಿ ಎಂದು ಆದೇಶ ಈ ಪ್ರಕರಣದಲ್ಲಿ ಕಾಲಿಯ ರಫೀಕನ್ನು ಕೊಲೆ ಮಾಡುವ ಬಗ್ಗೆ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಹಿದಾಯತ್ ನಗರ ಎಂಬಲ್ಲಿರುವ ಹಿದಾಯತ್ ಎಂಬ ಹೆಸರಿನ ಕ್ಲಬ್‌ನಲ್ಲಿ ದಿನಾಂಕ 14-02-2017 ರಂದು ಬೆಳಿಗ್ಗೆ 11 ಗಂಟೆಗೆ ಒಟ್ಟು ಸೇರಿ ಒಳ ಂಚು ನಡೆಸಿ ಈ ಪ್ರಕರಣದ 1ನೇ ಆರೋಪಿ ನೂರಲಿ ಹಾಗೂ ಇತರ 1 ಆರೋಪಿಗಳು ನಡೆಸಿದ ಒಳ ಸಂಚು ಮತ್ತು ಪಿತೂರಿಯಂತೆ ಕಾಲಿಯ ರಫೀಕ್ ಕೊಲೆ ಮಾಡಲು ಟಿಪ್ಪರ್ ಲಾರಿಯನ್ನು ಬಳಸಿ ದಿನಾಂಕ 14-02-2017  ರಂದು ಚಲಾಯಿಸಿಕೊಂಡು ಬಂದು ಘನ ನ್ಯಾಯಾಲಯದ ಹಾಗೂ ಉಳ್ಳಾಲ ಪೋಲಿಸ್ ಠಾಣೆ ವ್ಯಾಪ್ತಿಯ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಕೋಟೆಕಾರ್ ಎಂಬಲ್ಲಿರುವ ಪೆಟ್ರೋಲ್ ಪಂಪ್ ಮುಂಭಾಗ ರಾಷ್ಟ್ರೀಯ
ಹೆದ್ದಾರಿಯಲ್ಲಿ ಕಾಲಿಯ ರಫೀಕ್ ಮತ್ತು ಆತನ ಸ್ನೇಹಿತರು ಸಂಚರಿಸುತ್ತಿರುವ ಕಾರಿಗೆ ಟಿಪ್ಪರ್ ಲಾರಿಯನ್ನು ಡಿಕ್ಕಿ ಹೊಡೆಸಿ ಆ ಸಮಯದಲ್ಲಿ ಪೆಟ್ರೋಲ್ ಪಂಪ್ ಕಡೆಗೆ ಓಡಿದ ಕಾಲಿಯ ರಫೀಕ್‌ನ್ನು ಈ ಪ್ರಕರಣದ ಆರೋಫಿಗಳು ಬೆನ್ನು ಹತ್ತಿಕೊಂಡು ಹೋಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಹಾಗೂ ತಲವಾರಿನಿಂದ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಈ ಮೇಲೆ ಹೇಳಿದ 1  ರಿಂದ 9 ನೇ ಆರೋಪಿಗಳ ವಿರುದ್ಧ ಈ ಪ್ರಕರಣದ ಅಂದಿನ ತನಿಖೆದಾರರಾದ ಉಳ್ಳಾಲ ಪೋಲಿಸ್ ನಿರೀಕ್ಷಕರಾದ ಕೆ.ಆರ್. ಗೋಪಿಕೃಷ್ಣಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಗಳಾದ ನಂ.1 ನೂರಲಿ, ನಂ2 ಜಿಯ @ ಇಸುಬು ಶಿಯಾದ್, ನಂ.5 ರಶೀದ್, ನಂ.6  ಮಜಿಬ್ @ ಕಲ್ಲಟ್ರ ನಜೀಬ್ ಕೆ.ಎ. ಇವರನ್ನು ಮಾನ್ಯ ನಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಈ ಮೇಲಿನ ಆರೋಪಗಳನ್ನು ಸಾಬೀತು ಪಡಿಸುವರೇ, ಸರಕಾರದ ಪರವಾಗಿ ಅಭಿಯೋಜಕರು 1 ರಿಂದ 31 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, 1 ರಿಂದ 68  ದಾಖಲೆಗಳನ್ನು ಮತ್ತು ಮುದ್ದೆ ಮಾಲು 1 ರಿಂದ 38 ನ್ನು ಗುರುತು ಮಾಡಲಾಗಿತ್ತು.
ನಂತರ ವಾದ ವಿವಾದಗಳನ್ನು ಆಲಿಸಿದ ದಕ್ಷಿಣ ಕನ್ನಡ ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಹಾಗೂ  ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಈ ಮೇಲೆ ನಮೂದಿಸಿದ ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತು ಪಡಿಸುವರೇ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗಳನ್ನು ಬಿಡುಗಡೆ ಮಾಡಿ ತೀರ್ಪನ್ನು ಕೊಟ್ಟಿರುತ್ತಾರೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಯಾದ ಶ್ರೀಯುತ ವೈ. ವಿಕ್ರಮ್ ಹೆಗ್ಡೆ ಮತ್ತು ರಾಜೇಶ್ ಕೆ.ಜಿ. ಹಾಗೂ ಅಬ್ದುಲ್ ಅಜೀಜ್ ಬಾಯರ್ ವಾದಿಸಿರುತ್ತಾರೆ.

Leave a Reply

Your email address will not be published. Required fields are marked *