Visitors have accessed this post 805 times.
ಕೆಲ ದಿನಗಳಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಪುನಃ ಆರಂಭವಾಗಿ ಕಳೆದ ಆರು ದಿನಗಳಿಂದ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಮತ್ತು ಚಾಲಕ ಅರ್ಜುನ್ ಶವ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.
ಲಾರಿಯ ಮಾಲೀಕ ಮನಾಫ್ ಅವರು ಇದು ತಮ್ಮದೆ ಲಾರಿಯೆಂದು ಗುರುತಿಸಿದ್ದು, ಲಾರಿಯೊಳಗೆ ಮೃತದೇಹ ಪತ್ತೆಯಾಗಿದೆ. ಇದು ಅರ್ಜುನ್ ಅವರ ಮೃತದೇಹವೆಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ. ಇವರ ಜೊತೆ ಸ್ಥಳೀಯ ಜಗನ್ನಾಥ ಮತ್ತು ಲೋಕೇಶ್ ಕಣ್ಮರೆಯಾಗಿದ್ದು, ಇವರಿಗಾಗಿ ಶೋಧ ನಡೆಯಬೇಕಿದೆ.