Visitors have accessed this post 119 times.

ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತ್ ಉಪಚುನಾವಣೆಗೆ ಗೆಲ್ಲಲು ಸಾಮರ್ಥ್ಯವಿರುವ ಉತ್ತಮ,ಸಭ್ಯ ಅಭ್ಯರ್ಥಿ ರಾಜು ಪೂಜಾರಿ ಬೈಂದೂರು ಅವರನ್ನು ಗುರುತಿಸಿ ಕಣಕ್ಕಿಲಿಸಿದ ಹೈಕಮಾಂಡ್

Visitors have accessed this post 119 times.

ಆಕ್ಟೋಬರ್ 21 ನಡೆಯುವ ಸ್ಥಳೀಯ ಸಂಸ್ಥೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷವೂ ಸ್ಥಳೀಯ ಸಂಸ್ಥೆಯಲ್ಲಿ ದಶಕಗಳ ಕಾಲ ಸೇವೆಸಲ್ಲಿಸಿ ಅಪಾರ ಅನುಭವ ಹೊಂದಿರುವ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಸಹಕಾರಿ ಕ್ಷೇತ್ರವನ್ನು ಉಡುಪಿ ಜಿಲ್ಲೆಯಲ್ಲಿ ಬೆಳೆಯಲು ಕಾರಣಕರ್ತರಾದ ಬಿಲ್ಲವ ಮುಖಂಡ ರಾಜು ಪೂಜಾರಿ ಬೈಂದೂರು ಅವರಿಗೆ ಅಳೆದುತೂಗಿ,ಬಿಲ್ಲವ ಮತದಾರರ ಅನುಪಾತದ ಪ್ರಕಾರ ಮಣೆಹಾಕಲಾಗಿದೆ.ವಿದ್ಯಾರ್ಥಿ ಕಾಂಗ್ರೆಸಿನಿಂದಲೇ ಪಕ್ಷ ಸಂಘಟನೆಯಲ್ಲಿ ಗುರುತುಸಿಕೊಂಡು ಪಕ್ಷಕಟ್ಟುವಲ್ಲಿ ಸದಾ ಮುಂದಿರುವ ಇವರು ಉತ್ತಮ ವಾಗ್ಮಿಯೂ ಕೂಡ ಆಗಿದ್ದಾರೆ.ಪಕ್ಷದ ಹಲವಾರು ಹುದ್ದೆಗಳನ್ನು ನಿಭಾಯಿಸಿ ಸದ್ಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.ಸ್ಥಳೀಯಾಡಳಿತದಿಂದ ಬಂದ ಕಾರಣ ಉಭಯ ಜಿಲ್ಲೆಯ ಪಂಚಾಯತ್ ರಾಜ್ ಪ್ರತಿನಿಧಿಗಳ ಜೊತೆ ಆತ್ಮೀಯತೆ, ಪಕ್ಷ ನಿಷ್ಠೆ,ಉಭಯ ಜಿಲ್ಲೆಯ ನಾಯಕರುಗಳ,ರಾಜ್ಯಮಟ್ಟದ ನಾಯಕರುಗಳ ನಿಕಟ ಸಂಪರ್ಕ ಹೊಂದಿರುತ್ತಾರೆ.ಗೆಲ್ಲುವ ಸಾಮರ್ಥ್ಯ ಹಾಗೂ ಪ್ರಭಾವವನ್ನು ನೋಡಿಕೊಂಡು ರಾಜ್ಯಮಟ್ಟದ ನಾಯಕರು ಇವರಿಗೆ ಜೈ ಎಂದಿದ್ದಾರೆ.ಇವರ ಕಾರ್ಯವೈಖರಿಯನ್ನು ಮೆಚ್ಚಿ ಉಭಯ ಜಿಲ್ಲೆಯ ಎಲ್ಲಾ ನಾಯಕರುಗಳು ಹೈಕಮಾಂಡಿಗೆ ಹೆಸರು ಸೂಚಿಸಿರುವುದು ತಳಮಟ್ಟದ ನಾಯಕನಿಗೆ ಟಿಕೆಟ್ ಒಲಿದು ಬರಲು ಮುಖ್ಯ ಕಾರಣವಾಗಿದೆ.ಅಭ್ಯರ್ಥಿ ಆಯ್ಕೆಯಲ್ಲಿ ಪ್ರಪ್ರಥಮ ಬಾರಿಗೆ ಎಂಬಂತೆ ಕೆ.ಪಿ.ಸಿ.ಸಿ ಯವರು ಉಭಯ ಜಿಲ್ಲೆಯ ನಾಯಕರನ್ನು ಸೇರಿಸಿ ಸತತ ಮೂರು ಬಾರಿ ಸಭೆ ನಡೆಸಿ ಎರಡು ಬಾರಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಒಂದು ಬಾರಿ ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಸಭೆ ನಡೆಸಿ ಗೆಲುವಿನ ಎಲ್ಲಾ ರಣತಂತ್ರವನ್ನು ರೂಪಿಸಿರುವುದು ಇವರ ಮೇಲಿನ ನಂಬಿಕೆಯಿಂದಾಗಿದೆ…
ಅಲ್ಲದೆ 1987 ರಿಂದ NSUI ಪದಾಧಿಕಾರಿಯಾಗಿ,1990 ರಲ್ಲಿ ಬೈಂದೂರು ಬ್ಲಾಕ್ ಯುವಕಾಂಗ್ರೇಸ್ ಅದ್ಯಕ್ಷರಾಗಿ,1995-96 ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಭಾರ ಅದ್ಯಕ್ಷರಾಗಿ,1998ರಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ,ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪಕ್ಷದ ಕಟ್ಟಾಳಾಗಿ ಗುರುತಿಸಿಕೊಂಡಿದ್ದಾರೆ.ಅಲ್ಲದೇ ಮರವಂತೆ ಗ್ರಾ.ಪಂಚಾಯತ್ ಸದಸ್ಯರಾಗಿ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ,ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ-ಅದ್ಯಕ್ಷರಾಗಿ,ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ,ಆರೋಗ್ಯ,ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಅವಧಿಯಲ್ಲಿ ಜಿಲ್ಲೆಯು ಬಹಳಷ್ಟು ಅಭಿವೃದ್ಧಿ ಕಂಡಿದೆ.
ಸಹಕಾರಿ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಇವರು ದ.ಕ‌.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾಗಿ,ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ನಾವುಂದ ಇದರ ಅದ್ಯಕ್ಷರಾಗಿ,ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಅಪರೇಟಿವ್ ಸೊಸೈಟಿ ಅದ್ಯಕ್ಷರಾಗಿ,ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಬೈಂದೂರು ಇದರ ನಿರ್ದೇಶಕರಾಗಿ,ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಟ ಸಹಕಾರ ಸಂಘದ ನಿರ್ದೇಶಕರಾಗಿ ,ಕುಂದಾಪುರ ತಾಲೂಕು ಸಹಕಾರಿ ಯೂನಿಯನ್ ಇದರ ನಿರ್ದೇಶಕರಾಗಿ, ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ( ಸ್ವ್ಯಾಡ್) ಮಂಗಳೂರು ಇದರ ನಿರ್ದೇಶಕರಾಗಿ, ಮರವಂತೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಾಗಿ ಸೇವೆ ಸಲ್ಲಿಸಿ ಉಡುಪಿಯಲ್ಲಿ ಸಹಕಾರಿ ದುರೀಣರಾಗಿ ಅಪಾರ ಅನುಭವ ಮತ್ತು ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.

ಕೊಡುಗೈ ಧಾನಿಯಾಗಿ ದಾರ್ಮಿಕ,ಸಮಾಜಿಕ,ಶೈಕ್ಷಣಿಕವಾಗಿ ದುಡಿದಿರುವ ಇವರು ದಾರ್ಮಿಕ ಕ್ಷೇತ್ರವಾದ ಕೋಟಿ- ಚೆನ್ನಯ್ಯ ಪಂಜುರ್ಲಿ ಗರಡಿ ಬೈಂದೂರು ಇದರ ಅದ್ಯಕ್ಷರಾಗಿ,ಒತ್ತಿನೆನೆ ಬೈಂದೂರು ಶ್ರೀ ರಾಘವೇಂದ್ರ ಬೃಂದಾವನ ಟ್ರಸ್ಟ್ ಇದರ ಟ್ರಸ್ಟಿಯಾಗಿ, ಸೇನೇಸ್ವರ ದೇವಸ್ಥಾನ ಬೈಂದೂರು ಇದರ ಗೌರವದ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ದೈವಭಕ್ತರಾಗಿದ್ದಾರೆ.
ಸರಕಾರಿ ಸಲಹಾ ಸಮಿತಿಗಳಲ್ಲಿ ದುಡಿದಿರುವ ಇವರು ದ.ಕ ಟೆಲಿಕಾಂ ಸಲಹಾ ಸಮಿತಿ,ಖಾದಿ ಬೋರ್ಡ್ ಬೆಂಗಳೂರು ಇದರ ಸದಸ್ಯರಾಗಿ,ಉಡುಪಿ ಜಿಲ್ಲಾ ಕೆ.ಡಿ.ಪಿ ಸದಸ್ಯರಾಗಿ ,ಎ.ಪಿ.ಎಂ.ಸಿ ಸದಸ್ಯರಾಗಿಯೂ ಕೂಡ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ.ಇವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸರಕಾರ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿ, ರಾಜ್ಯ ಮಟ್ಟದ ಶ್ರೇಷ್ಠ ಪ್ರಶಸ್ತಿಗಳು ಲಭಿಸಿದೆ‌…

Leave a Reply

Your email address will not be published. Required fields are marked *