(NW Ration Card) ರಾಜ್ಯದಲ್ಲಿ ಹಲವು ಜನ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದು, ಶೀಘ್ರವೇ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆರಂಭ ಮಾಡಲಿದೆ. ಹೀಗಾಗಿ BPL, APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದರೇ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ.
ಪಡಿತರ ಚೀಟಿ ಪಡೆಯಲು ಇರಬೇಕಾದ ಅರ್ಹತೆ ಏನು?:
* ಹೊಸ ಪಡಿತರ ಚೀಟಿಗಾಗಿ ನವ ದಂಪತಿಗಳು ಅರ್ಜಿ ಸಲ್ಲಿಸಬಹುದು.
* ತಮ್ಮ ಕುಟುಂಬದಿಂದ ಹೊರಗೆ ಉಳಿದು ಪ್ರತ್ಯೇಕವಾಗಿ ವಾಸಿಸುವವರು ಅರ್ಜಿ ಸಲ್ಲಿಸಬಹುದು.(ಹಿಂದಿನ ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಅದನ್ನು ತೆಗೆಸಿ ಹಾಕಬೇಕು.)
* ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ (APL/BPL) ಎಂದು ನಿರ್ಧರಿಸಲಾಗುತ್ತದೆ.
ಬೇಕಾಗಿರುವ ದಾಖಲೆಗಳು:
* ಆಧಾರ್ ಕಾರ್ಡ್ (Aadar Card)
* ಖಾಯಂ ನಿವಾಸದ ಪುರಾವೆ (Address Proof)
* ಮೊಬೈಲ್ ಸಂಖ್ಯೆ (Mobile No)
* ಡ್ರೈವಿಂಗ್ ಲೈಸೆನ್ಸ್ (Driving License)
* ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ (Photo)
* ಮತದಾರರ ಗುರುತಿನ ಚೀಟಿ (Voter ID Card)
* ಆದಾಯ ಪ್ರಮಾಣ ಪತ್ರ (Income certificate)
* ಮನೆಯ ಸದಸ್ಯರ ಬಗ್ಗೆ ಮಾಹಿತಿ
ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?:
* https://ahara.kar.nic.in/home ಲಾಗಿನ್ (Login) ಆಗಿ
* ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು (select) ಕ್ಲಿಕ್ (Click) ಮಾಡಿ
* ಹೊಸ ಪೇಜ್ ನಲ್ಲಿ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ (scan) ಪ್ರತಿಯನ್ನು ಅಪ್ ಲೋಡ್ (Upload) ಮಾಡಿ.
* ಅಪ್ ಲೋಡ್ ಮಾಡಿದ ನಂತರ ಫಾರ್ಮ್ (Form) ಅನ್ನು ಸಬ್ ಮಿಟ್ ಮಾಡಿ
* ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿಯನ್ನೂ (New Ration Card Request) ಕಳಿಸಲಾಗುತ್ತದೆ.ಪಡೆಯಬಹುದು.
ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ)
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ: 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಿ ಪಡೆಯಬಹುದಾಗಿದೆ.