ಸುರತ್ಕಲ್: ಕಾರು ಅಡ್ಡಾದಿಡ್ಡಿ ಸಂಚರಿಸಿ ಪಾದಚಾರಿಗಳಿಗೆ ಡಿಕ್ಕಿ

ಸುರತ್ಕಲ್: ಸುರತ್ಕಲ್ ಪೇಟೆಯ ಬಜಪೆ ರಸ್ತೆಯ ಕುಡ್ವಾಡ್ ಬಳಿ ಭಾನುವಾರ ಮಧ್ಯಾಹ್ನ ಕಾರೊಂದು ಅಡಾದಿಡ್ಡಿ ಸಂಚರಿಸಿದ ಪರಿಣಾಮ ಪಾದಚಾರಿಗಳಿಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಾರ್ಖಂಡ್ ಮೂಲದ ನಸೀಮ್ (20), ಖಲೀಮ್ ಅನ್ನಾರಿ (21) ಎಂದು ಗುರುತಿಸಲಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಲಾ ಯಿಸುತ್ತಿದ್ದ ವಾಮನ ಎಂಬವರ ವಿರುದ್ಧ ನಿರ್ಲಕ್ಷ್ಯ ವಾಹನ ಚಾಲನೆಯ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply